ಬೆಂಗಳೂರು: ಕೇಂದ್ರ ಸರ್ಕಾರದ ಮೇಲೆ ವಿರೋಧ ಪಕ್ಷಗಳು ಅನೇಕ ಬಾರಿ ವಾಕ್ ಪ್ರಹಾರ ನಡೆಸಿ ಆರೋಪಗಳ ಸುರಿಮಳೆಗೈದಿದ್ದವು. ಅವೆಲ್ಲಕ್ಕೂ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಕೋವಿಂದ್ ಅವರು ಭಾಷಣದ ಮೇಲೆ ವಂದನಾ ನಿರ್ಣಯದಲ್ಲಿ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳ ಟೀಕೆಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಅವರು ಇಂದು ಮಾಡಿರುವ ಭಾಷಣ ಭಾರತದ ಅಭಿವೃದ್ಧಿಯ ವಿಚಾರಕ್ಕೆ ದಿಕ್ಸೂಚಿಯಾಗಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೃಷಿ ಕ್ಷೇತ್ರದಿಂದ ಹಿಡಿದು ವಿಜ್ಞಾನ, ತಂತ್ರಜ್ಞಾನದ ವರೆಗಿನ ದೇಶದ ಬೆಳವಣಿಗೆಗೆ ಸಂಬಂಧಿಸಿದಂತೆ ಈ ಭಾಷಣ ಹಲವು ಹೊಳಹುಗಳನ್ನು ತೆರೆದಿಟ್ಟಿದೆ ಎಂದು ಅವರು ಹೇಳಿದ್ದಾರೆ.
ವಿರೋಧಿಗಳ ಕುಹಕ ವ್ಯಂಗ್ಯಗಳನ್ನು, ವಿರೋಧವನ್ನು ಸ್ಪರ್ಧಾ ಮನೋಭಾವದಿಂದಲೇ ಸ್ವೀಕರಿಸಿರುವ ಪ್ರಧಾನಿಗಳು, ಈ ರಾಷ್ಟ್ರವನ್ನು ಅವರು ವಿಶ್ವದ ಬಲಿಷ್ಟ ಶಕ್ತಿಯಾಗಿ ಪರಿವರ್ತಿಸುವಲ್ಲಿ ಅವರು ತೋರುತ್ತಿರುವ ಮುತ್ಸದ್ಧಿತನವನ್ನು ಪ್ರಸ್ತುತಪಡಿಸಿದೆ. ಕೇಂದ್ರದ ನೂತನ ಕೃಷಿ ಸುಧಾರಣಾ ನೀತಿಗಳ ಬಗ್ಗೆಯೂ ಅವರು ಎಳೆ ಎಳೆಯಾಗಿ ತಿಳಿಸಿದ್ದು, ಇದು ಅವರಲ್ಲಿನ ರೈತ ಪರ ಕಾಳಜಿ, ಅವರಿಗೆ ನ್ಯಾಯ ದೊರಕಿಸಿಕೊಡಲೇ ಬೇಕು ಎಂಬ ಆಶಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸವದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.