ಉಡುಪಿ: ಯೋಗ ಕಲೆಯ ವಿವಿಧ ಭಂಗಿಗಳಲ್ಲಿ ವಿಶೇಷ ಸಾಧನೆ ಮೆರೆದಿರುವ ಜಿಲ್ಲೆಯ ಪಿತ್ರೋಡಿಯ 11 ವರ್ಷದ ಪುಟಾಣಿ ತನುಶ್ರೀ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ 6 ನೇ ವಿಶ್ವದಾಖಲೆ ಬರೆದಿದ್ದಾಳೆ.
ನಗರದ ಸೈಂಟ್ ಸಿಸಿಲಿಸ್ ಶಾಲೆಯ ಆವರಣದಲ್ಲಿ 55 ಬಾರಿ ಉರುಳುವ ಮೂಲಕ ʼಮೋಸ್ಟ್ ಬ್ಯಾಕ್ವರ್ಡ್ಸ್ ಬಾಡಿ ಸ್ಕಿಪ್ ಇನ್ ಒನ್ ಮಿನಿಟ್ʼ ವಿಭಾಗದಲ್ಲಿ 6 ನೇ ವಿಶ್ವದಾಖಲೆಯನ್ನು ಬರೆದು ಮಹತ್ವದ ಸಾಧನೆ ಮಾಡಿದ್ದಾಳೆ. ತನುಶ್ರೀ ಸಾಧನೆಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ನ ಅಧಿಕಾರಿಗಳು, ಉಡುಪಿಯ ಜನತೆ ಸಾಕ್ಷಿಯಾದರು.
ತನುಶ್ರೀ 2017 ರಲ್ಲಿ ನಿರಾಲಾಂಭ ಪೂರ್ಣ ಚಕ್ರಾಸನ ವನ್ನು 1 ನಿಮಿಷದಲ್ಲಿ 19 ಬಾರಿ ಮಾಡವ ಮೂಲಕ, 2018 ರಲ್ಲಿ ಮೋಸ್ಟ್ ಫುಲ್ ಬಾಡಿ ರೆವೆಲ್ಯೂಷನ್ ಮೇಂಟೇನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೊಸಿಷನ್ ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಮಾಡಿ ಗಿನ್ನಿಸ್ ವಿಶ್ವ ದಾಖಲೆ ಬರೆದ್ದಾಳೆ. ಹಾಗೆಯೇ, 2018 ರಲ್ಲಿ ಇಟಲಿಯ ರೋಮ್ನಲ್ಲಿ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಸೇರಿ ಯೋಗ ಪ್ರದರ್ಶನ ಮಾಡಿದ್ದರು. 2019 ರಲ್ಲಿ ಉಡುಪಿಯ ಸೈಂಟ್ ಸಿಸಿಲಿಸ್ ಶಾಲೆಯಲ್ಲಿ ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಒನ್ ಮಿನಿಟ್ ಇನ್ ಧನುರಾಸನ ಭಂಗಿಯಲ್ಲಿ , 2020 ರ ಫೆ. 22 ರಂದು ಉದ್ಯಾವರ ಗ್ರಾ ಪಂ ಮೈದಾನದಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 100 ಮೀ ಅಂತರವನ್ನು 1 ನಿಮಿಷ 14 ಸೆಕೆಂಡ್ ಅಂತರದಲ್ಲಿ ಕ್ರಮಿಸಿ ವಿಶ್ವದಾಖಲೆ ಬರೆದಿದ್ದರು.
ಇದೀಗ ತನುಶ್ರೀ 6 ನೇ ವಿಶ್ವದಾಖಲೆಯನ್ನು ಯಶಸ್ವಿಯಾಗಿ ನೆರವೇರಿಸಿ ಸಾಧನೆ ಮೆರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.