ಬೆಂಗಳೂರು: ಪಾದಚಾರಿಗಳು, ಬೈಕ್ ಸವಾರರು ಸೇರಿದಂತೆ ಇನ್ನಿತರರನ್ನು ದರೋಡೆಕೋರರು, ಕಳ್ಳಕಾಕರಿಂದ ರಕ್ಷಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿರುವ ಯಾಂತ್ರೀಕೃತ ಗಸ್ತಿನ ಜೊತೆಗೆ ಪೊಲೀಸ್ ಕಾಲ್ನಡಿಗೆ ಗಸ್ತು ಪುನರಾರಂಭ ಮಾಡುವುದು ಉತ್ತಮ ಎಂದು ಭದ್ರತಾ ತಜ್ಞರು ವರದಿ ನೀಡಿದ್ದಾರೆ.
ಕೊರೋನಾ ಸಂಕಷ್ಟದಿಂದಾಗಿ ಹಲವು ಮಂದಿ ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಅಂತಹ ಕೆಲವು ನಿರುದ್ಯೋಗಿಗಳಲ್ಲಿ ಹತಾಶೆಯ ಮನಸ್ಥಿತಿ ಹೆಚ್ಚಾಗಿ, ಅದು ಅವರನ್ನು ಅಪರಾಧ ಕೃತ್ಯಗಳಿಗೆ ಪ್ರೇರೇಪಿಸುತ್ತದೆ. ಇದು ಸಮಾಜದಲ್ಲಿನ ಅಪರಾಧಿ ಕೃತ್ಯಗಳ ಏರಿಕೆಗೆ ಕಾರಣವಾಗಲಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮ, ಕಾಲ್ನಡಿಗೆ ಗಸ್ತು ಮೊದಲಾದ ಕ್ರಮಗಳನ್ನು ಆರಂಭಿಸಿದಲ್ಲಿ ಉತ್ತಮ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಾತನಾಡಿದ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಸಂಗ್ರಾಮ ಸಿಂಗ್, ಗಸ್ತು ಇಲ್ಲದ ಸಂದರ್ಭದಲ್ಲೇ ದರೋಡೆ, ಕಳ್ಳತನ, ಸರಗಳ್ಳತನ, ಸಣ್ಣ ಪ್ರಮಾಣದ ಅಪರಾಧಗಳು ಹೆಚ್ಚಾಗಿ ಕಂಡು ಬರುತ್ತವೆ. ಕಾಲ್ನಡಿಗೆ ಗಸ್ತು ಇಂತಹ ಅಪರಾಧಗಳನ್ನು ಹತೋಟಿಗೆ ತರುವಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಪೊಲೀಸರ ರಾತ್ರಿ ಗಸ್ತು ರಾತ್ರಿಯಲ್ಲಿ ಒಂಟಿಯಾಗಿ ನಡೆದು ಹೋಗುವವರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿಯೂ ಹೆಚ್ಚು ಪರಿಣಾಮಕಾರಿಯೇ ಸರಿ. ಇದು ಅಪರಾಧ ಕೃತ್ಯಗಳಲ್ಲಿ ತೊಡಗುವವರಲ್ಲಿ ಭಯ ಹುಟ್ಟಿಸುತ್ತದೆ ಎಂದು ಮತ್ತೋರ್ವ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.