ಬೆಂಗಳೂರು: ಈ ಬಾರಿಯ ಬಜೆಟ್ನಲ್ಲಿ ನೈಋತ್ಯ ರೈಲ್ವೆಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡಿದೆ. 3245 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಿದೆ. ಕಳೆದ ಬಾರಿಗಿಂತ ಸುಮಾರು 20% ಹೆಚ್ಚುವರಿ ಅನುದಾನ ನೈಋತ್ಯ ರೈಲ್ವೆಗೆ ದೊರಕಿದೆ.
ಇದರೊಂದಿಗೆ ರಾಜ್ಯ ಸರ್ಕಾರವೂ 1223 ಕೋಟಿ ರೂ. ಮೊತ್ತವನ್ನು ನೈಋತ್ಯ ರೈಲ್ವೆ ಅಭಿವೃದ್ಧಿಗೆ ನೀಡುವುದಾಗಿ ಭರವಸೆಯನ್ನು ನೀಡಿದೆ. ಹೀಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡರ ಅನುದಾನವನ್ನು ಒಟ್ಟುಗೂಡಿಸಿ ರಾಜ್ಯ ರೈಲ್ವೆಗೆ 4467 ಕೋಟಿ ರೂ. ಗಳ ಅನುದಾನ ದೊರೆತಂತಾಗಿದ್ದು, ಈ ಬಾರಿಯ ಅನುದಾನ ದಾಖಲೆ ನಿರ್ಮಿಸಿದೆ ಎಂದೇ ಹೇಳಬಹುದಾಗಿದೆ.
ಈ ಅನುದಅನಕ್ಕೆ ಸಂಬಂಧಿಸಿದಂತೆ ನೈಋತ್ಯ ರೈಲ್ವೆ ವಲಯದ ಮಹಾ ಪ್ರಬಂಧಕ ಅಜಯ್ ಕುಮಾರ್ ಸಿಂಗ್, ಈ ಬಾರಿ ಯಾವುದೇ ರೀತಿಯ ನೂತನ ಯೋಜನೆಗಳನ್ನು ಸರ್ಕಾರ ಘೋಷಿಸಿಲ್ಲ. ಆದರೆ ಈ ಹಿಂದೆ ಘೋಷಣೆ ಮಾಡಲಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು, ರೈಲ್ವೆಯ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುವ ಸಲುವಾಗಿ ಈ ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರ 300 ಕೋಟಿ ಮತ್ತು ರೈಲ್ವೆ ಇಲಾಖೆ 300 ಕೋಟಿ ರೂ. ಗಳನ್ನು ಒದಗಿಸಲಿದೆ. 18 ಸಾವಿರ ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, ಈ ಬಾರಿ ಅನುದಾನವೂ ಸೇರಿ ಒಟ್ಟು 1400 ಕೋಟಿ ರೂ. ದೊರೆತಂತಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.