ನವದೆಹಲಿ: ಇಂದು ವಿಶ್ವ ಕ್ಯಾನ್ಸರ್ ದಿನ. ಮನುಕುಲಕ್ಕೆ ಅಂಟಿದ ಅತಿ ಭಯಾನಕ ರೋಗಗಳಲ್ಲಿ ಕ್ಯಾನ್ಸರ್ ಒಂದು. ಈ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಣೆ ಮಾಡಲಾಗುತ್ತದೆ.
ವಿಶ್ವಾದ್ಯಂತ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ಯಾನ್ಸರ್ ಬಗೆಗಿನ ಶಿಕ್ಷಣವನ್ನು ಸುಧಾರಿಸಲು ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿಸಿ) ಈ ಜಾಗತಿಕ ಉಪಕ್ರಮವನ್ನು ಮುನ್ನಡೆಸುತ್ತದೆ. ಕ್ಯಾನ್ಸರ್ ಅನ್ನು ಒಂದು ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಕಾಯಿಲೆಯಾಗಿ ಮಾಡಿ ಜಗತ್ತನ್ನು ಮರುರೂಪಿಸಲು ಒಟ್ಟಾಗಿ ಕೆಲಸ ಮಾಡುವುದು ಈ ದಿನದ ಉದ್ದೇಶವಾಗಿದೆ.
ನಾವು ಕ್ಯಾನ್ಸರ್ ಪದವನ್ನು ಕೇಳಿಯೇ ಬೆಳೆದಿದ್ದೇವೆ, ಈ ಕಾಯಿಲೆಯಿಂದ ಅನೇಕರು ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದನ್ನೂ ನೋಡಿದ್ದೇವೆ. Cancer.gov ಪ್ರಕಾರ, ಕ್ಯಾನ್ಸರ್ ಎನ್ನುವುದು ಪರಸ್ಪರ ಸಂಬಂಧಿತ ಕಾಯಿಲೆಗಳ ಒಂದು ಸಂಗ್ರಹಕ್ಕೆ ನೀಡಲಾದ ಹೆಸರು. ಎಲ್ಲಾ ರೀತಿಯ ಕ್ಯಾನ್ಸರ್ಗಳಲ್ಲಿ, ಮಾನವನ ದೇಹದ ಕೆಲವು ಜೀವಕೋಶಗಳು ವಿಭಜನೆಗೊಳ್ಳಲು ಪ್ರಾರಂಭವಾಗುತ್ತವೆ ಮತ್ತು ಸುತ್ತಮುತ್ತಲಿನ ಅಂಗಾಂಶಗಳಿಗೆ ಹರಡುತ್ತವೆ.
ಕ್ಯಾನ್ಸರ್ ಮಾನವ ದೇಹದಲ್ಲಿ ಎಲ್ಲಿ ಬೇಕಾದರೂ ಪ್ರಾರಂಭವಾಗಬಹುದು, ಇದು ಕನಿಷ್ಠ ಟ್ರಿಲಿಯನ್ ಕೋಶಗಳಿಂದ ಕೂಡಿದೆ. ಕ್ಯಾನ್ಸರ್ ಬೆಳೆದಂತೆ ಕೋಶಗಳ ಪುನರುತ್ಪಾದನೆಯ ಕ್ರಮಬದ್ಧ ಪ್ರಕ್ರಿಯೆಯು ಧ್ವಂಸವಾಗುತ್ತದೆ. ಆದ್ದರಿಂದ, ಅನೇಕ ಕ್ಯಾನ್ಸರ್ಗಳು ಘನ ಗೆಡ್ಡೆಗಳನ್ನು ರೂಪಿಸುತ್ತವೆ, ಇದು ದೇಹದಾದ್ಯಂತ ಹರಡುತ್ತದೆ.
ವಿಶ್ವ ಕ್ಯಾನ್ಸರ್ ದಿನವನ್ನು 2000 ನೇ ಇಸವಿಯಲ್ಲಿ ಪ್ರಾರಂಭಿಸಲಾಗಿದೆ. ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳಲು, ಆರಂಭಿಕ ಪತ್ತೆ, ಸೂಕ್ತ ಚಿಕಿತ್ಸೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶವನ್ನು ಈ ದಿನ ಹೊಂದಿದೆ.
“ನನ್ನಿಂದ ಸಾಧ್ಯ” ಎನ್ನುವುದೇ 2021ರ ವಿಶ್ವ ಕ್ಯಾನ್ಸರ್ ದಿನಾಚರಣೆಯ ಥೀಮ್ ಆಗಿದೆ.
Worldcancerday.org ಈ ವರ್ಷದ ಥೀಮ್ ‘I Am and I Will’ ಎಂದು ಹೇಳಿದೆ. ಇದು ನಮ್ಮ ಬಗ್ಗೆ ಮತ್ತು ಈ ರೋಗದ ವಿರುದ್ಧ ಹೋರಾಡುವ ನಮ್ಮ ಬದ್ಧತೆಯಾಗಿದೆ. 2030 ರ ವೇಳೆಗೆ ಕ್ಯಾನ್ಸರ್ನಿಂದ ಉಂಟಾಗುವ ಅಕಾಲಿಕ ಮರಣಗಳ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡಲು ಆರೋಗ್ಯ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದು ಇದರ ಉದ್ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.