ಉಡುಪಿ: ಜಿಲ್ಲೆಯ ಉದ್ಯಾವರದ ಕಲ್ಸಂಕ ಎಂಬ ಪ್ರದೇಶದಲ್ಲಿ ನಾರಾಯಣ ಪೂಜಾರಿಯವರ ಮನೆಯ ಸಮೀಪ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಏಳನೇ ಶತಮಾನದ ಆಳುಪರ ಕಾಲದ ಶಾಸನ ಪತ್ತೆಯಾಗಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜು-ಹೆಜಮಾಡಿ ಇಲ್ಲಿನ ದೈಹಿಕ ಶಿಕ್ಷಕ ಅಲ್ವಿನ್ ಅಂದ್ರಾದೆ ಅವರು ಶಾಸನವನ್ನು ಪತ್ತೆ ಮಾಡಿದ್ದಾರೆ. ಈ ಶಾಸನವನ್ನು ಪರಿಶೀಲಿಸಿದ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಇದು 7ನೇ ಶತಮಾನದ ಆಳುಪರ ಶಾಸನವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಗ್ನಿ ಶಿಲೆ (Volcanic Rock)ಯಿಂದ ಕೊರೆಯಲ್ಪಟ್ಟ ಈ ಶಾಸನವು 3 ಅಡಿ ಎತ್ತರವನ್ನು ಹೊಂದಿದ್ದು, ಶಿಲೆಯ ಎರಡು ಭಾಗದಲ್ಲಿ ಶಾಸನವನ್ನು ಬರೆಯಲಾಗಿದೆ. ಶಾಸನದ ಒಂದು ಮಗ್ಗುಲಲ್ಲಿ 5 ಸಾಲುಗಳಿದ್ದು, ಇನ್ನೊಂದು ಮಗ್ಗುಲಲ್ಲಿ 6 ಸಾಲುಗಳಿವೆ. 7ನೇ ಶತಮಾನದ ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಕೊನೆಯಲ್ಲಿ ನಿರಿದ ಕಲ್ಲು ಎಂಬ ಉಲ್ಲೇಖವಿದೆ. ಹಾಗಾಗಿ ಈ ಶಾಸನವನ್ನು ಯಾವುದೋ ಘಟನೆಯ ನೆನಪಿಗಾಗಿ ಹಾಕಿರಬಹುದೆಂದು ಮತ್ತು
ಈ ಶಾಸನದ ಹೆಚ್ಚಿನ ಅಧ್ಯಯನವನ್ನು ಮಾಡುವುದಾಗಿ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ತಿಳಿಸಿದ್ದಾರೆ.
ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು, ಮಂಜುನಾಥ ಆಚಾರ್ಯ ಪಳ್ಳಿ ಮತ್ತು ಸ್ಥಳೀಯರು ಸಹಕಾರ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.