ಲಕ್ನೋ: ಚೌರಿ ಚೌರಾ ಶತಮಾನೋತ್ಸವದ ನೆನಪಿಗಾಗಿ ಉತ್ತರ ಪ್ರದೇಶದ ಸುಮಾರು 50,000 ವಿದ್ಯಾರ್ಥಿಗಳು ಫೆಬ್ರವರಿ 3 ರ ಬೆಳಿಗ್ಗೆ 10 ರಿಂದ ಫೆಬ್ರವರಿ 4 ರ ಮಧ್ಯಾಹ್ನ 12 ರವರೆಗೆ ವಂದೇ ಮಾತರಂ ಹಾಡಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚೌರಿ ಚೌರಾದಲ್ಲಿ ನಡೆಯುವ ಶತಮಾನೋತ್ಸವದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.
ಸಮಾರಂಭದ ವೇಳೆ ಮಕ್ಕಳು ಹಾಡುವ ವಂದೆ ಮಾತರಂ ಅನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸೇರಿಸಲಾಗುವುದು ಎಂದು ಉತ್ತರ ಪ್ರದೇಶದ ಮಾಧ್ಯಮಿಕ ಶಿಕ್ಷಣ ನಿರ್ದೇಶಕ ವಿನಯ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಇದು ರಾಷ್ಟ್ರೀಯ ಹಾಡನ್ನು ಒಟ್ಟಾಗಿ ಹಾಡಿದ 20,000 ಜನರ ಹಿಂದಿನ ದಾಖಲೆಯನ್ನು ಮೀರಿಸಲಿದೆ.
ವಂದೇ ಮಾತರಂ ಮೊದಲ ಚರಣವನ್ನು ಸೆಲ್ಯೂಟ್ ಫೋಸ್ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಡಿ ಧ್ವನಿಮುದ್ರಣ ಮಾಡಲಿದ್ದಾರೆ. ಈ ಕ್ಲಿಪ್ಗಳನ್ನು ಆಯಾ ಶಾಲೆಗಳಿಗೆ ಕಳುಹಿಸುತ್ತಾರೆ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಒದಗಿಸಿದ ಲಿಂಕ್ನಲ್ಲಿ ವೀಡಿಯೊಗಳನ್ನು ಅಪ್ಲೋಡ್ ಮಾಡಲಾಗುತ್ತದೆ.
ಆಯ್ದ ವಿದ್ಯಾರ್ಥಿಗಳು ದೋಷರಹಿತವಾಗಿ ಸರಿಯಾದ ಉಚ್ಚಾರಣೆಯೊಂದಿಗೆ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಸಂಯೋಜಿತ ಕವಿತೆಯನ್ನು ಪಠಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಮಾಧ್ಯಮಿಕ ಶಾಲೆಗಳ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.
1922 ರ ಫೆಬ್ರವರಿ 4 ರಂದು ನಡೆದ ಚೌರಿ ಚೌರಾ ಘಟನೆಯಲ್ಲಿ ಅಸಹಕಾರ ಚಳವಳಿಯ ಪ್ರತಿಭಟನಾಕಾರರು ಗೋರಖ್ಪುರದ ಸಮೀಪದ ಪಟ್ಟಣದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.