ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಜಸ್ಥಾನದ 20 ಮಂದಿ ತೃತೀಯ ಲಿಂಗಿಗಳು ಲಕ್ಷಾಂತರ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಅಲ್ಲದೇ ಇದು ನಮ್ಮ ಜೀವನದ ಒಂದು ಭಾವನಾತ್ಮಕ ಕ್ಷಣವೆಂದು ಅವರು ಬಣ್ಣಿಸಿದ್ದಾರೆ. ಕಲಿಯುಗದಲ್ಲಿ ತೃತೀಯ ಲಿಂಗಿಗಳಿಗೆ ಒಳ್ಳೆಯದಾಗುತ್ತದೆ ಎಂದು ಶ್ರೀರಾಮ ತಮಗೆ ಆಶೀರ್ವದಿಸಿದ್ದಾನೆ ಎಂಬ ತಮ್ಮ ನಂಬಿಕೆಯನ್ನು ಅವರು ಈ ಸಂದರ್ಭದಲ್ಲಿ ಪುನರುಚ್ಛರಿಸಿದ್ದಾರೆ.
ತೃತೀಯ ಲಿಂಗಿಗಳು ರಾಮ ಮಂದಿರ ನಿರ್ಮಾಣದ ಭಾಗವಾಗುತ್ತಿರುವುದಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ, ಇನ್ನಷ್ಟು ಹೆಚ್ಚಿನ ಕೊಡುಗೆಯನ್ನು ನೀಡುವುದಾಗಿ ಹೇಳಿದ್ದಾರೆ.
ಪವಿತ್ರ ದೇವಾಲಯದ ನಿರ್ಮಾಣಕ್ಕಾಗಿ ಮೇವಾರ್ ಪ್ರದೇಶದ ತೃತೀಯ ಲಿಂಗಿ ರೇಖಾ ಬುವಾಜಿ 5,111,11 ರೂಪಾಯಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, “ಇದು ಒಂದು ಐತಿಹಾಸಿಕ ಕ್ಷಣವಾಗಿದೆ ಮತ್ತು ದೇವಾಲಯದ ನಿರ್ಮಾಣಕ್ಕೆ ಕೊಡುಗೆ ನೀಡಲು ಸಮಾಜದ ಎಲ್ಲಾ ವರ್ಗದ ಜನರು ಪರಸ್ಪರ ಒಂದಾಗಬೇಕು. ನಿರ್ಮಾಣಕ್ಕಾಗಿ ಇಡೀ ಭಾರತ ಒಗ್ಗಟ್ಟಾಗಿರಬೇಕು ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಸಮೃದ್ಧ ಭಾರತಕ್ಕಾಗಿ ಭಗವಾನ್ ರಾಮ ಆಶೀರ್ವಾದವನ್ನು ನೀಡಬೇಕೆಂದು ನಾನು ಬಯಸುತ್ತೇನೆ” ಎಂದಿದ್ದಾರೆ.
ಅಂತೆಯೇ, ಬೇವರ್ನ ಮತ್ತೊಬ್ಬ ಕಿರಣ್ಬಾಯಿ 3,21,000 ರೂ.ಗಳನ್ನು ನೀಡಿದ್ದಾರೆ ಮತ್ತು ಶೀಘ್ರದಲ್ಲೇ ರಾಮ ರಾಜ್ಯವನ್ನು ನಿರ್ಮಾಣವಾಗುತ್ತದೆ ಎಂಬ ಕನಸಿನೊಂದಿಗೆ ದೇಣಿಗೆ ನೀಡಿರುವುದಾಗಿ ಹೇಳಿದ್ದಾರೆ.
ಹೀಗೆ ಸುಮಾರು 20 ಮಂದಿ ತೃತೀಯ ಲಿಂಗಿಗಳು ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ನೆರವನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.