ಕೌಲಾಲಂಪುರ: ಇತ್ತೀಚಿಗಷ್ಟೇ ನಂ.1 ಸ್ಥಾನವನ್ನು ಅಲಂಕರಿಸಿದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಲೇಷಿಯನ್ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್ನ ಸೆಮಿಫೈನನಲ್ಲಿ ಮುಗ್ಗರಸಿದ್ದಾರೆ.
ಇಂದು ಮಲೇಷ್ಯಾದ ಪುತ್ರ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ನಲ್ಲಿ ಅವರು ಒಲಿಂಪಿಕ್ ಚಾಂಪಿಯನ್ ಚೀನಾದ ಲೀ ಕ್ಷೆರುಯಿ ವಿರುದ್ಧ 21-13, 17-21, 20-22 ಅಂತರಗಳಿಂದ ಸೋತಿದ್ದಾರೆ.
ಸತತ 1 ಗಂಟೆ 8 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ ಚೀನಾದ ಆಟಗಾರ್ತಿ ಲೀ ಕ್ಷೆರುಯಿ ಅವರು ಆ ಬಳಿಕದ ಸೆಟ್ ಗಳಲ್ಲಿ ತಮ್ಮ ಪಾರುಪತ್ಯ ಮೆರೆದರು. ಭಾರತೀಯ ಆಟಗಾರ್ತಿ ವಿರುದ್ಧ ಒಟ್ಟು 11 ಪಂದ್ಯಗಳನ್ನಾಡಿರುವ ಲೀ ಕ್ಷೆರುಯಿ ಈ ಪಂದ್ಯದ ವಿಜಯದೊಂದಿಗೆ ತಮ್ಮ ಗೆಲುವಿನ ಸಂಖ್ಯೆಯನ್ನು 9ಕ್ಕೆ ಏರಿಸಿಕೊಂಡರು. ಅಲ್ಲದೆ ತಮ್ಮ ಕೈಯಿಂದ ಜಾರಿ ಹೋಗಿದ್ದ ನಂಬರ್ ಸ್ಥಾನವನ್ನು ಕೂಡ ಕ್ಷೆರುಯಿ ಮತ್ತೆ ತಮ್ಮದಾಗಿಸಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.