ಬೆಂಗಳೂರು: ಕೊರೋನಾ ಭೀತಿ ಈ ಬಾರಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋ ಗೂ ಎದುರಾಗಿದ್ದು, ಈ ಶೋವನ್ನು ಮನೆಯಲ್ಲಿಯೇ ಕುಳಿತು ವೀಕ್ಷಣೆ ಮಾಡಲು ಆ್ಯಪ್ ಮೂಲಕ ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಈ ಏರ್ ಶೋ ನಡೆಸಲಾಗುತ್ತಿದೆ. ಹಿಂದಿನಂತೆ ಈ ಬಾರಿ ಹೆಚ್ಚು ಜನರಿಗೆ ಇದರಲ್ಲಿ ಭಾಗವಹಿಸುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಪ್ರೇಕ್ಷಕರಿಗೆ ಈ ಆಪ್ ಮೂಲಕ ಏರ್ ಇಂಡಿಯಾ ಏರ್ ಶೋ- 2021 ವೀಕ್ಷಣೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸದ್ದಾರೆ. ಫೆ. 3 ರಿಂದ ನಡೆಯಲಿರುವ ಈ ಶೋ ವನ್ನು ಜನರು ಮನೆಯಲ್ಲಿಯೇ ಕುಳಿತು ವೀಕ್ಷಣೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿ ಸಹ ಪ್ರಕಟವಾಗಿದೆ. ಹೆಚ್ಚು ಜನಸಂದಣಿಯಾಗದಂತೆ ಈ ಏರ್ ಶೋವನ್ನು ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ, ಇದನ್ನು ಆ್ಯಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸಲು ಆಸಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾಗೆಯೇ ಅಂತರರಾಷ್ಟ್ರೀಯ ಪ್ರತಿನಿಧಿಗಳು ಕ್ವಾರಂಟೈನ್, ಕೊರೋನಾ ಟೆಸ್ಟ್ ಗೆ ಒಳಪಡುವುದು ಕಡ್ಡಾಯ. ಎಲ್ಲಾ ರಾಷ್ಟ್ರೀಯ, ಅಂತರರಾಷ್ಟೀಯ, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಭಾಗವಹಿಸುವವರೆಲ್ಲರೂ ಜ. 31 ರ 9 ಗಂಟೆಯ ಬಳಿಕ ಕೊರೋನಾ ಮಾದರಿ ಪರೀಕ್ಷೆ ಮಾಡಿಸಿ, ಕೊರೋನಾ ನೆಗೆಟಿವ್ ವರದಿಯನ್ನು ಆ್ಯಪ್ ಮುಖೇನ ಆಯೋಜಕರಿಗೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.