ನವದೆಹಲಿ: ಭಾರತ-ಶ್ರೀಲಂಕಾ ದ್ವಿಪಕ್ಷೀಯ ಸಂಬಂಧ ಇಂದು ಒಂದು ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾಗಲಿದೆ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ 5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಗಳನ್ನು ಹೊಂದಿರುವ ಸರಕು ಕೊಲಂಬೊವನ್ನು ಇಂದು ತಲುಪಲಿದೆ.
ಶ್ರೀಲಂಕಾಕ್ಕೆ ಕೋವಿಡ್ -19 ಲಸಿಕೆಗಳ ಈ ಉಡುಗೊರೆ ಭಾರತದ “ಲಸಿಕೆ ಮೈತ್ರಿ” ಉಪಕ್ರಮದ ಒಂದು ಭಾಗವಾಗಿದ್ದು, ನೆರೆಹೊರೆಯ ಇತರ ಏಳು ದೇಶಗಳಿಗೆ ಭಾರತ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ.
ಸಾಂಕ್ರಾಮಿಕ ರೋಗದ ಕಠಿಣ ಸಂದರ್ಭದಲ್ಲಿ ಈ ಮಾನವೀಯ ನೆರವು ಶ್ರೀಲಂಕಾದ ಜೊತೆಗಿನ ಉತ್ತಮ ಭಾಂದವ್ಯ, ನೆರೆಹೊರೆಯ ಮೊದಲು ಎಂಬ ನೀತಿ ಮತ್ತು ಸಾಗರ ಸಿದ್ಧಾಂತಕ್ಕೆ ಭಾರತದ ಬದ್ಧತೆಯನ್ನು ತೋರಿಸುತ್ತದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಡೆದ ವರ್ಚುವಲ್ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಕೋವಿಡ್ -19 ಲಸಿಕೆಗಳನ್ನು ಶ್ರೀಲಂಕಾಕ್ಕೆ ತಲುಪಿಸುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರಿಗೆ ನೀಡಿದ್ದರು.
ಈ ಲಸಿಕೆಯ ತುರ್ತು ಬಳಕೆಗೆ ಈ ವರ್ಷ ಜನವರಿ 23 ರಂದು ಶ್ರೀಲಂಕಾ ಅನುಮೋದನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.