ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ನೀಡಿದ ಕರೆಗೆ ಅನುಗುಣವಾಗಿ ದೇಶೀಯ ಆಟಿಕೆಗಳ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುವ ಪ್ರಯತ್ನವಾಗಿ ಫೆಬ್ರವರಿ 1 ರಂದು ಮಂಡನೆಗೊಳ್ಳಲಿರುವ ಕೇಂದ್ರ ಬಜೆಟ್ನಲ್ಲಿ ಹೊಸ ಮೀಸಲು ನೀತಿಯನ್ನು ರೂಪಿಸುವ ಬಗ್ಗೆ ಸರ್ಕಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ವರದಿ ಮಾಡಿವೆ.
ನೀತಿ ಉತ್ತೇಜನವು ಅಟಿಕೆ ವಲಯದಲ್ಲಿ ಉದ್ಯಮಗಳನ್ನು ಆಕರ್ಷಿಸುವ ಮತ್ತು ರಾಷ್ಟ್ರದಲ್ಲಿ ಆಟಿಕೆ ತಯಾರಿಸುವ ಉದ್ಯಮಕ್ಕೆ ಬಲವಾದ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ ಭಾರತದ ಒಟ್ಟು ಆಟಿಕೆ ರಫ್ತು ಕೇವಲ 100 ಮಿಲಿಯನ್ ಡಾಲರ್ ಆಗಿರುವುದರಿಂದ ಇದು ಮಹತ್ವವನ್ನು ಪಡೆಯುತ್ತದೆ, ಇದು ಜಾಗತಿಕ ಬೇಡಿಕೆಯ ಶೇಕಡಾ 0.5 ಕ್ಕಿಂತ ಕಡಿಮೆ ಪಾಲನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಭಾರತವನ್ನು ಆಟಿಕೆಗಳ ತಾಣವನ್ನಾಗಿ ಪರಿವರ್ತಿಸುವುದು ಮೋದಿ ಸರ್ಕಾರ ಗುರಿಯಾಗಿದೆ.
ಪಿಯೂಷ್ ಗೋಯಲ್ ನೇತೃತ್ವದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ವಲಯವನ್ನು ಶಕ್ತಿಯುತಗೊಳಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಗಮನಿಸಬೇಕು. ಗುಣಮಟ್ಟದ ನಿಯಂತ್ರಣ ಆದೇಶದ ಸ್ಥಾಪನೆ ಮತ್ತು ಆಟಿಕೆ ಆಮದಿನ ಮೇಲೆ ಆಮದು ಸುಂಕವನ್ನು ಹೇರುವುದು ಇದರಲ್ಲಿ ಸೇರಿದೆ.
ಭಾರತೀಯ ಆಟಿಕೆ ತಯಾರಿಕೆ ಉದ್ಯಮವು ಸುಮಾರು 4,000 ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಒಳಗೊಂಡಿರುವ ಅಸಂಘಟಿತ ವಲಯವಾಗಿದೆ. ಅಲ್ಲದೆ, ರಾಷ್ಟ್ರವು ಶೇಕಡಾ 85 ರಷ್ಟು ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತದೆ, ಇದರಲ್ಲಿ ಗರಿಷ್ಠ ಚೀನಾದಿಂದ ಬರುತ್ತದೆ, ನಂತರದ ಸ್ಥಾನಗಳಲ್ಲಿ ಶ್ರೀಲಂಕಾ, ಮಲೇಷ್ಯಾ, ಜರ್ಮನಿ, ಹಾಂಗ್ ಕಾಂಗ್ ಮತ್ತು ಅಮೆರಿಕಾದಿಂದ ಭಾರತಕ್ಕೆ ಬರುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.