ನವದೆಹಲಿ: ಮೂರು ದಿನಗಳ ಹಿಂದೆ ಸಿಕ್ಕಿಂನ ನಕು ಲಾ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಘರ್ಷಣೆ ನಡೆದಿತ್ತು ಎಂದು ವರದಿಗಳು ತಿಳಿಸಿವೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಗೆ ಸೇರಿದ ಸೈನಿಕರು ಗಡಿ ಗಸ್ತು ಸಂದರ್ಭದಲ್ಲಿ ಗಡಿ ದಾಟಿ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ನಂತರ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ಭುಗಿಲೆದ್ದಿದೆ ಎನ್ನಲಾಗಿದೆ.
ರಕ್ಷಣಾ ಪತ್ರಕರ್ತ ಶಿವ ಅರೂರ್ ಅವರ ಪ್ರಕಾರ, ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಜಗಳವಾಗಿದೆ ಮತ್ತು ಇದು ಚೀನಾದ ಕಡೆಯಿಂದ ಹಲವಾರು ಮಂದಿಗೆ ಗಾಯಗಳಾಗಿವೆ. ಕೆಲವು ಭಾರತೀಯ ಸೈನಿಕರು ಸಹ ಗಾಯಗೊಂಡಿದ್ದಾರೆ.
ಚೀನಾದ ಈ ಏಕಪಕ್ಷೀಯ ಆಕ್ರಮಣವು ಲಡಾಖ್ನ ಎಲ್ಎಸಿ ಉದ್ದಕ್ಕೂ ಉಭಯ ದೇಶಗಳು ಈಗಾಗಲೇ ಉದ್ವಿಗ್ನ ಸ್ಥಿತಿಯಲ್ಲಿ ಸಿಲುಕಿರುವ ಸಮಯದಲ್ಲಿ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.
ಪೂರ್ವ ಲಡಾಕ್ನಲ್ಲಿ ಸೈನ್ಯದ ಸ್ಥಾನಗಳನ್ನು ಬಲಪಡಿಸುವ ಮೂಲಕ ಚೀನಾ ಈಗ ಉಭಯ ದೇಶಗಳ ನಡುವಿನ ಸೆಪ್ಟೆಂಬರ್ ಒಪ್ಪಂದವನ್ನು ಮುರಿದಿದೆ ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ ಭಾರತವು ಹೆಚ್ಚಿನ ನಿಯೋಜನೆಗಳನ್ನು ಮಾಡಿದೆ.
ಭಾರತದ ಕ್ಷಿಪ್ರ ಗಡಿ ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಚೀನಾ ಏಕಪಕ್ಷೀಯವಾಗಿ ಈ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ.
BREAKING: Indian & Chinese soldiers clashed at Naku La, Sikkim border three days ago. Chinese troop patrol attempted to intrude across, brawl ensued. Several Chinese soldiers injured, some injuries on Indian side. Situation tense but calm now. Breaking on @IndiaToday
— Shiv Aroor (@ShivAroor) January 25, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.