ಬೆಂಗಳೂರು: ಫೆ. 3 ರಿಂದ ಫೆ. 5 ರ ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಇದರಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ಕಿರಣ್ ಮತ್ತು ಸಾರಂಗ್ ಹೆಲಿಕಾಪ್ಟರ್ ತಂಡಗಳ ಜಂಟಿ ಪ್ರದರ್ಶನ ನಡೆಯಲಿದೆ.
ಕೊರೋನಾ ಹಿನ್ನೆಯಲ್ಲಿ ಈ ಬಾರಿಯ ಏರ್ ಶೋ ಕೊಂಚ ಮಟ್ಟಿಗೆ ಕಳೆಗುಂದಿದೆ. ಹಿಂದಿನಂತೆ ಈ ಬಾರಿ ಹೆಚ್ಚು ಜನರಿಗೆ ಈ ಏರ್ ಶೋ ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಆದರೂ ಈ ಬಾರಿಯ ಏರ್ ಶೋ ಮತ್ತೊಂದು ಪ್ರಥಮಕ್ಕೆ ಸಾಕ್ಷಿಯಾಗಲಿದೆ ಎಂದು ಸಂಬಂದಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೊದಲ ಬಾರಿಗೆ ಸೂರ್ಯ ಕಿರಣ್ ಮತ್ತು ಸಾರಂಗ್ ಹೆಲಿಕಾಪ್ಟರ್ ತಂಡಗಳ ಜಂಟಿ ಪ್ರದರ್ಶನ ನೀಡಲಿರುವುದಾಗಿ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ.
ಭಾರತೀಯ ವಾಯುಪಡೆಯ ಚಿನೂಕ್ಸ್, ಎಎಚ್-64 ವಿಮಾನಗಳು ಸಹ ಇದೇ ಮೊದಲ ಬಾರಿಗೆ ಈ ಏರ್ ಶೋ ನಲ್ಲಿ ಪಾಲ್ಗೊಳ್ಳಲಿವೆ. ಈ ಬಾರಿ ಭಾರತೀಯ 63 ವಿಮಾನಗಳು ಈ ಏರ್ ಶೋ ನಲ್ಲಿ ಭಾಗವಹಿಸಲಿರುವುದಾಗಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರದರ್ಶನದಲ್ಲಿ 11 ಅಂತರರಾಷ್ಟ್ರೀಯ ವಿಮಾನಗಳು ಪಾಲ್ಗೊಳ್ಳುವ ಬಗೆಗೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಏರ್ ಶೊ ಗೆ ದಿನಕ್ಕೆ 15 ಸಾವಿರ ಜನರಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.