ನವದೆಹಲಿ: ಭಾರತದ ಲಸಿಕೆ ಕೊಡುಗೆ ಕಾರ್ಯಕ್ರಮದ ಭಾಗವಾಗಿ 50,000 ಡೋಸ್ ಕೋವಿಶೀಲ್ಡ್ ಲಸಿಕೆ ಶುಕ್ರವಾರ ಸೀಶೆಲ್ಸ್ ತಲುಪಲಿದೆ. ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಲಸಿಕೆಯನ್ನು ಪಡೆದ ನಾಲ್ಕು ಹಿಂದೂ ಮಹಾಸಾಗರದ ದೇಶಗಳಲ್ಲಿ ಸೀಶೆಲ್ಸ್ ಕೂಡ ಒಂದಾಗಿ ಹೊರಹೊಮ್ಮಿದೆ..
ಲಸಿಕೆಗಳನ್ನು ನೀಡುವ ಮೂಲಕ ಭಾರತ ಸೀಶೆಲ್ಸ್ನ ವಿಶ್ವಾಸಾರ್ಹ ಪಾಲುದಾರ ಎಂಬುದನ್ನು ಸಾಬೀತುಪಡಿಸಿದೆ. ಇದು ಸೀಶೆಲ್ಸ್ನೊಂದಿಗಿನ ಭಾರತದ ವಿಶೇಷ ಸಂಬಂಧಗಳ ಪ್ರತಿಬಿಂಬವಾಗಿದೆ. ಸೀಶೆಲ್ಸ್ ಸುಮಾರು ಒಂದು ಲಕ್ಷ ನಿವಾಸಿಗಳನ್ನು ಹೊಂದಿದೆ ಮತ್ತು 50 ಸಾವಿರ ಡೋಸ್ಗಳನ್ನು ಭಾರತ ಅದಕ್ಕೆ ನೀಡಿದ್ದು, ಇದರಿಂದ ಒಟ್ಟು ಸೀಶೆಲ್ಸ್ ಜನಸಂಖ್ಯೆಯ ಸುಮಾರು 25 ಪ್ರತಿಶತಕ್ಕೆ ಲಸಿಕೆ ಪೂರೈಸಲು ಸಾಧ್ಯವಾಗುತ್ತದೆ.
ಒಂದು ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಶುಕ್ರವಾರ ಮಾರಿಷಸ್ಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ. ಮಾರಿಷಸ್ ಭಾರತದ ಅತ್ಯುತ್ತಮ ಸ್ನೇಹಿತ ರಾಷ್ಟ್ರವಾಗಿದೆ.
ಮಾರಿಷಸ್ನಲ್ಲಿ 1.3 ದಶಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇದೆ. ದೇಶವು ಬಾಹ್ಯ ವ್ಯಾಪಾರ ಮತ್ತು ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿದೆ, ಇದು ಕೋವಿಡ್ -19 ಸಾಂಕ್ರಾಮಿಕದಿಂದ ತೀವ್ರವಾಗಿ ಹೊಡೆತ ತಿಂದಿದೆ. ಲಸಿಕೆಗಳನ್ನು ಪೂರೈಸುವಂತೆ ಮಾರಿಷಸ್ ಸರ್ಕಾರ ಭಾರತಕ್ಕೆ ಮನವಿ ಮಾಡಿತ್ತು. ಮಾರಿಷಸ್ಗೆ ಒಂದು ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಗಳನ್ನು ದಾನ ಮಾಡುವುದರಿಂದ ಅದರ ಮುಂಚೂಣಿ ವೈದ್ಯಕೀಯ ಕಾರ್ಯಕರ್ತರ ಗಣನೀಯ ಪ್ರಮಾಣದ ವ್ಯಾಕ್ಸಿನೇಷನ್ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತದೆ.
ಭಾರತದಿಂದ 1.5 ಮಿಲಿಯನ್ ಡೋಸ್ ಕೋವಿಶೀಲ್ಡ್ ಲಸಿಕೆ ಶುಕ್ರವಾರ ಮಯನ್ಮಾರಿನ ಯಾಂಗೊನ್ಗೆ ತಲುಪಲಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ “ಮೇಕ್ ಇನ್ ಇಂಡಿಯಾ” ಕೋವಿಡ್ಶೀಲ್ಡ್ ಲಸಿಕೆಗಳನ್ನು ಭಾರತೀಯ ಸರ್ಕಾರದಿಂದ ಉಡುಗೊರೆಯಾಗಿ ಪಡೆದ ಮೊದಲ ದೇಶಗಳಲ್ಲಿ ಮಯನ್ಮಾರ್ ಕೂಡ ಒಂದು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.