ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಅತ್ಯುತ್ತಮ ಕಾರ್ಯವನ್ನು ಮಾಡಿದ್ದಾರೆ ಎಂದು ಸುಮಾರು ಮೂರನೇ ನಾಲ್ಕು ಭಾಗದಷ್ಟು ಭಾರತೀಯರು ನಂಬಿದ್ದಾರೆ ಎಂದು ಇಂಡಿಯಾ ಟುಡೆ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಅಭಿಪ್ರಾಯ ಸಂಗ್ರಹದಲ್ಲಿ ಬಹಿರಂಗಪಡಿಸಲಾಗಿದೆ.
ಪಿಎಂ ಮೋದಿಯವರು ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ರೀತಿ ಅತ್ಯುತ್ತಮವಾಗಿದೆ ಎಂದು ಶೇಕಡಾ 23 ರಷ್ಟು ಜನರು ಪ್ರತಿಕ್ರಿಯಿಸಿದರೆ, 50 ಪ್ರತಿಶತದಷ್ಟು ಜನರು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ 18 ಪ್ರತಿಶತದಷ್ಟು ಜನರು ಾವರ ಕಾರ್ಯ ಸರಾಸರಿ ಎಂದು ಹೇಳಿದರೆ, 7 ಪ್ರತಿಶತದಷ್ಟು ಜನರು ಕಳಪೆ ಎಂದು ಹೇಳಿದ್ದಾರೆ ಮತ್ತು ಕೇವಲ 2 ಪ್ರತಿಶತದಷ್ಟು ಜನರು ಮಾತ್ರ ತೀರಾ ಕಳಪೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾರ್ವಿ ಇನ್ಸೈಟ್ ಜೊತೆಗುಡಿ ಇಂಡಿಯಾ ಟುಡೆ MOTN ಅಭಿಪ್ರಾಯ ಸಂಗ್ರಹವನ್ನು ನಡೆಸಿದೆ. ಜನವರಿ 3-13, 2021 ರಿಂದ ದೇಶಾದ್ಯಂತ ಮುಖಾಮುಖಿ ಮತ್ತು ದೂರವಾಣಿ ಮೂಲಕ ಒಟ್ಟು 12,232 ಸಂದರ್ಶನಗಳನ್ನು ನಡೆಸಲಾಯಿತು.
ಭಾರತ ಮತ್ತು ಜಗತ್ತು ಕೋವಿಡ್ -19 ಸಾಂಕ್ರಾಮಿಕ ರೋಗದ ನೆರಳಿನಲ್ಲಿ ವಾಸಿಸಲು ಆರಂಭಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಭಾರತವು ಮಾರ್ಚ್ 25, 2020 ರಿಂದ ನಾಲ್ಕು ಹಂತಗಳಲ್ಲಿ ಸಂಪೂರ್ಣ ಲಾಕ್ಡೌನ್ಗೆ ಸಾಕ್ಷಿಯಾಗಿತ್ತು. ಇದೀಗ ಅದರ ಕರಿನೆರಳಿನಿಂದ ಚೇತರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.