ನವದೆಹಲಿ: ಕಳೆದ ರಾತ್ರಿ ವಾಷಿಂಗ್ಟನ್ನ ಯುಎಸ್ ಕ್ಯಾಪಿಟಲ್ ಕಟ್ಟಡದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜೋ ಬೈಡನ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ 46 ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಕೊರೋನಾವೈರಸ್ ಮತ್ತು ಭದ್ರತಾ ಕಾಳಜಿಗಳ ನಡುವೆ ಸಮಾರಂಭ ನಡೆದಿದೆ.
ಯು.ಎಸ್ ಅಧ್ಯಕ್ಷರಾಗಿ ನಡೆಸಿದ ತಮ್ಮ ಮೊದಲ ಭಾಷಣದಲ್ಲಿ ಬೈಡನ್ ಅವರು, ರಾಜಕೀಯ ಉಗ್ರವಾದ ಮತ್ತು ಬಿಳಿಯರ ಪ್ರಾಬಲ್ಯವನ್ನು ಸೋಲಿಸುವ ಪ್ರತಿಜ್ಞೆ ಮಾಡಿದರು.
ಅಮೆರಿಕಾವನ್ನು ಏಕೀಕರಿಸುವ ಬಗ್ಗೆ ಮಾತನಾಡಿದರು ಮತ್ತು ತಾನು ಎಲ್ಲಾ ಅಮೆರಿಕನ್ನರಿಗೆ ಅಧ್ಯಕ್ಷನಾಗಿರುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.
ಜಮೈಕಾ ಮತ್ತು ಭಾರತದಿಂದ ವಲಸೆ ಬಂದ ಪೋಷಕರ ಪುತ್ರಿ ಕಮಲಾ ಹ್ಯಾರಿಸ್ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ದಕ್ಷಿಣ ಏಷ್ಯಾದ ಮೂಲ ಹೊಂದಿರುವ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಪ್ರಧಾನಿ ನರೇಂದ್ರ ಮೋದಿ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ಟ್ವಿಟರ್ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
“ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜೋ ಬೈಡನ್ ಅವರಿಗೆ ಹೃತ್ಪೂರ್ವಕ ಅಭಿನಂದನೆ. ಭಾರತ-ಯುಎಸ್ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸಲು ಅವರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತೇನೆ” ಎಂದಿದ್ದಾರೆ.
“ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದ ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆ. ಇದು ಒಂದು ಐತಿಹಾಸಿಕ ಸಂದರ್ಭ. ಭಾರತ-ಯುಎಸ್ಎ ಸಂಬಂಧಗಳನ್ನು ಹೆಚ್ಚು ದೃಢವಾಗಿಸಲು ಅವರೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ. ಭಾರತ-ಯುಎಸ್ಎ ಸಹಭಾಗಿತ್ವವು ನಮ್ಮ ವಿಶ್ವಕ್ಕೆ ಪ್ರಯೋಜನಕಾರಿಯಾಗಿದೆ” ಎಂದಿದ್ದಾರೆ.
My warmest congratulations to @JoeBiden on his assumption of office as President of the United States of America. I look forward to working with him to strengthen India-US strategic partnership.
— Narendra Modi (@narendramodi) January 20, 2021
Congratulations to @KamalaHarris on being sworn-in as @VP. It is a historic occasion. Looking forward to interacting with her to make India-USA relations more robust. The India-USA partnership is beneficial for our planet.
— Narendra Modi (@narendramodi) January 20, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.