ನವದೆಹಲಿ: ತನ್ನ ದೇಶದ ನಾಗರಿಕರನ್ನು ಕೊರೋನಾವೈರಸ್ ಮಹಾಮಾರಿಯಿಂದ ರಕ್ಷಿಸುವ ಸಲುವಾಗಿ ಲಸಿಕೆಗಳನ್ನು ಪೂರೈಕೆ ಮಾಡುವಂತೆ ಡೊಮಿನಿಕ್ ರಾಷ್ಟ್ರದ ಪ್ರಧಾನಮಂತ್ರಿ ರೂಸೆವೆಲ್ಟ್ ಸ್ಕೆರಿಟ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಪತ್ರ ಬರೆದಿರುವ ಸ್ಕೆರಿಟ್ ಅವರು “ನಾವು 2021ಕ್ಕೆ ಕಾಲಿಟ್ಟಿರುವ ಈ ವೇಳೆ, ಕೋವಿಡ್-19 ವಿರುದ್ಧದ ಹೋರಾಟವನ್ನು ಮುನ್ನಡೆಸಲು 72,100 ಜನಸಂಖ್ಯೆಯನ್ನು ಹೊಂದಿರುವ ಡೊಮಿನಿಕ್ಗೆ ಆಕ್ಸ್ಫರ್ಡ್-ಅಸ್ಟ್ರಾಝೆನೆಕ ವ್ಯಾಕ್ಸಿನ್ ಅಗತ್ಯವಿದೆ. ಹೀಗಾಗಿ ನಿಮಗೆ ವಿನಂಬ್ರವಾಗಿ ವಿನಂತಿಸುತ್ತಿದ್ದೇನೆ, ನಮ್ಮ ಜನಸಂಖ್ಯೆಯನ್ನು ಸುರಕ್ಷಿತವಾಗಿಡಲು ಡೋಸ್ ಅನ್ನು ದಾನ ಮಾಡುವ ಮೂಲಕ ನಮಗೆ ನೆರವು ನೀಡಿ” ಎಂದಿದ್ದಾರೆ.
ಡೊಮಿನಿಕ್ ರಾಷ್ಟ್ರಕ್ಕೆ ಲಸಿಕೆ ಪೂರೈಸುವ ಬಗ್ಗೆ ಮೋದಿ ಇನ್ನಷ್ಟೇ ಚಿಂತನೆ ನಡೆಸಬೇಕಾಗಿದೆ.
ಆದರೆ ಲಸಿಕೆಯನ್ನು ಅಗತ್ಯ ಇರುವ ದೇಶಗಳಿಗೆ ಕಳುಹಿಸಿಕೊಡಲು ಭಾರತ ಬದ್ಧವಾಗಿದೆ ಎಂದು ಈಗಾಗಲೇ ಪ್ರಧಾನಿ ಮೋದಿ ಹೇಳಿದ್ದಾರೆ.
ಜಾಗತಿಕ ಸಮುದಾಯದ ಆರೋಗ್ಯ ಅಗತ್ಯಗಳನ್ನು ಪೂರೈಸಲು ಭಾರತ ಬದ್ಧವಾಗಿದೆ ಎಂದು ಮೋದಿ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಸಾಂಕ್ರಾಮಿಕ ಸವಾಲುಗಳನ್ನು ನಿವಾರಿಸಲು ವಿಶ್ವದ ಔಷಧಾಲಯವಾದ ಭಾರತ ಲಸಿಕೆಗಳನ್ನು ತಲುಪಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.