ಬೆಂಗಳೂರು: ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ 2020-21 ರ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಈ ಸಂಬಂಧ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್, ಎಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ ತರಗತಿಗಳು ಅಕ್ಟೋಬರ್ 4 ರಿಂದ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಪದವಿ ತರಗತಿಗಳು : 5ನೇ ಸೆಮಿಸ್ಟರ್ 2021ರ ಫೆ. 28 ಕ್ಕೆ ಮುಗಿಯಲಿದ್ದು, ಪರೀಕ್ಷೆಗಳು ಮಾರ್ಚ್ 31 ರಂದು ಮುಗಿಯಲಿವೆ. 1 ಮತ್ತು 3 ನೇ ಸೆಮಿಸ್ಟರ್ಗಳು ಮಾರ್ಚ್ 31 ಕ್ಕೆ ಮುಗಿದು, ಪರೀಕ್ಷೆಗಳು ಎ. 30 ರಂದು ಮುಗಿಯಲಿದೆ. 6 ನೇ ಸೆಮಿಸ್ಟರ್ ಎ. 1 ರಂದು ತೊಡಗಿ ಜುಲೈ 31 ಕ್ಕೆ ಮುಗಿಯಲಿವೆ. ಆಗಸ್ಟ್ 31 ಕ್ಕೆ ಪರೀಕ್ಷೆಗಳು ಮುಗಿಯಲಿವೆ. 2 ಮತ್ತು 4 ನೇ ಸೆಮಿಸ್ಟರ್ ತರಗತಿಗಳು ಮೇ 2 ಕ್ಕೆ ಆರಂಭವಾಗಿ, ಆಗಸ್ಟ್ 31 ಕ್ಕೆ ಮುಕ್ತಾಯವಾಗಲಿವೆ. ಪದವಿಯ 1,3,5 ನೇ ಸೆಮಿಸ್ಟರ್ಗಳು ಅ. 4 ಕ್ಕೆ ಆರಂಭವಾಗಿ, 2022 ರ ಜ. 31ಕ್ಕೆ ಮುಗಿಯಲಿವೆ. 2,4,6 ನೇ ಸೆಮಿಸ್ಟರ್ 2022 ರ ಮಾರ್ಚ್ 1 ರಿಂದ ಜೂನ್ 30 ರ ವರೆಗೆ ನಡೆಯಲಿವೆ. ಪರೀಕ್ಷೆಗಳು 2022ರ ಜುಲೈ 31 ಕ್ಕೆ ಮುಗಿಯಲಿವೆ.
ಎಂಜಿನಿಯರಿಂಗ್ : 7ನೇ ಸೆಮಿಸ್ಟರ್ 2021 ರ ಫೆ. 28 ಕ್ಕೆ ಮುಗಿಯುತ್ತದೆ. 1,3,5 ನೇ ಸೆಮಿಸ್ಟರ್ಗಳು ಮಾರ್ಚ್ 31 ಕ್ಕೆ ಮುಗಿದು, ಪರೀಕ್ಷೆಗಳು ಎಪ್ರಿಲ್ 31 ಕ್ಕೆ ಅಂತ್ಯವಾಗಲಿವೆ. 8 ನೇ ಸೆಮಿಸ್ಟರ್ ಎಪ್ರಿಲ್ 1 ರಂದು ಶುರುವಾಗಿ, ಜುಲೈ 31 ಕ್ಕೆ ಮುಗಿಯುತ್ತವೆ. ಪರೀಕ್ಷೆಗಳು ಆಗಸ್ಟ್ 31 ಕ್ಕೆ ಮುಗಿಯಲಿವೆ. 2,4,6 ನೇ ಸೆಮಿಸ್ಟರ್ಗಳು ಮೇ 2 ರಂದು ಆರಂಭವಾಗಿ, ಆಗಸ್ಟ್ 31 ಕ್ಕೆ ಮುಗಿಯಲಿವೆ. ಎಂಜಿನಿಯರಿಂಗ್ ವಿಭಾಗದ 1,3,5,7 ನೇ ಸೆಮಿಸ್ಟರ್ಗಳು 2021 ರ ಅಕ್ಟೋಬರ್ 4 ರಿಂದ ಆರಂಭವಾಗಲಿವೆ. ಈ ತರಗತಿಗಳು ಜ. 31 ಕ್ಕೆ ಅಂತ್ಯವಾಗಲಿವೆ. 2,4,6,8 ನೇ ಸೆಮಿಸ್ಟರ್ಗಳು ಮಾರ್ಚ್ 1 ರಿಂದ ಜೂನ್ 30 ರ ವರೆಗೆ ನಡೆಯಲಿವೆ.
ಸ್ನಾತಕೋತ್ತರ ಪದವಿ: 3 ನೇ ಸೆಮಿಸ್ಟರ್ ತರಗತಿಗಳು 2021 ಫೆ. 28 ಕ್ಕೆ ಮುಗಿಯಲಿದ್ದು, ಪರೀಕ್ಷೆಗಳು ಮಾರ್ಚ್ 31 ಕ್ಕೆ ಅಂತ್ಯವಾಗಲಿವೆ. 1 ನೇ ಸೆಮಿಸ್ಟರ್ ಎ.1 ಕ್ಕೆ ಮುಗಿದು, ಪರೀಕ್ಷೆಗಳು ಮಾರ್ಚ್ 31 ಕ್ಕೆ ಅಂತ್ಯವಾಗಲಿವೆ. 4 ನೇ ಸೆಮಿಸ್ಟರ್ ಎ. 1 ರಿಂದ ಆರಂಭವಾಗಿ ಜುಲೈ 31.ಕ್ಕೆ ಮುಗಿಯಲಿವೆ. 2ನೇ ಸೆಮಿಸ್ಟರ್ನ ತರಗತಿಗಳು ಮೇ 2 ರಿಂದ ಆರಂಭವಾಗಿ ಆ.31 ಕ್ಕೆ ಮುಗಿಯಲಿವೆ. 1,3 ನೇ ಸೆಮಿಸ್ಟರ್ಗಳು 2021 ರ ಅಕ್ಟೋಬರ್ 4 ರಂದು ಆರಂಭವಾಗಲಿದೆ. 2,4 ನೇ ಸೆಮಿಸ್ಟರ್ಗಳು ಮಾರ್ಚ್ 1 ರಿಂದ ಆರಂಭವಾಗಿ ಜೂನ್ 22 ಕ್ಕೆ ಅಂತ್ಯವಾಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.