ಹೈದರಾಬಾದ್: ತೆಲಂಗಾಣದ ಕೊಥಗುಡೆಮ್ ಬಳಿಯ ಸುಜಾತಾ ನಗರದಲ್ಲಿರುವ 30 ವರ್ಷದ ಮಹಿಳೆ ಆದಿಲಕ್ಷ್ಮೀ. ಆಟೋಮೊಬೈಲ್ ರಿಪೇರಿ ಅಂಗಡಿಯಲ್ಲಿ ಪತಿಗೆ ಸಮಾನಾಗಿ ದುಡಿಯುವ ಈಕೆ ಅಡುಗೆಮನೆಯಲ್ಲೂ ಪರಿಣಿತೆ ಮತ್ತು ಗ್ಯಾರೇಜ್ನಲ್ಲೂ ಪರಿಣಿತೆ.
ಗ್ಯಾರೇಜ್ನಲ್ಲಿ ತನ್ನ ಕೌಶಲ್ಯದಿಂದ ಪುರುಷರನ್ನು ಮೀರಿಸುವ ಈಕೆ ತೆಲಂಗಾಣದ ಏಕೈಕ ಮಹಿಳಾ ಮೆಕ್ಯಾನಿಕ್. ಇಬ್ಬರು ಮಕ್ಕಳ ತಾಯಿಯಾಗಿರುವ ಈಕೆ ದ್ವಿಚಕ್ರ ವಾಹನ, ಟ್ರಕ್ಗಳ ಟೈಯರ್ ಬದಲಾಯಿಸುವುದರಿಂದ ಹಿಡಿದು ಎಲ್ಲಾ ರಿಪೇರಿ ಕಾರ್ಯವನ್ನು ಮಾಡುತ್ತಾರೆ.
ಆದಿಲಕ್ಷ್ಮಿ ಮತ್ತು ವೀರಭದ್ರಮ್ ಅವರು 2010 ರಲ್ಲಿ ವಿವಾಹವಾದರು, ನಂತರ ಜೀವನೋಪಾಯಕ್ಕಾಗಿ ಸುಜಾತಾ ನಗರಕ್ಕೆ ತೆರಳಿದರು. ಅಲ್ಲಿ ಮೆಕ್ಯಾನಿಕ್ ಮತ್ತು ವೆಲ್ಡಿಂಗ್ ಅಂಗಡಿಯನ್ನು ಸ್ಥಾಪಿಸಿದರು. ತನ್ನ ಗಂಡನಿಗೆ ಸಹಾಯ ಮಾಡುವ ಸಲುವಾಗಿ ಅದಿಲಕ್ಷ್ಮೀ ಮೆಕ್ಯಾನಿಕ್ ಕೆಲಸವನ್ನು ಕಲಿಯಲು ಪ್ರಾರಂಭಿಸಿದರು, ಈಗ ಸಾಕಷ್ಟು ಪರಿಣಿತ ಮೆಕ್ಯಾನಿಕ್ ಆಗಿ ಅವರು ಹೊರಹೊಮ್ಮಿದ್ದಾರೆ.
“ಪಂಕ್ಚರ್ ಆದ ಒಳಗಿನ ಟ್ಯೂಬ್ ಅನ್ನು ಸರಿಪಡಿಸುವುದು, ಟೈಯರುಗಳನ್ನು ಮತ್ತು ವಾಹನದ ರಿಮ್ ಮತ್ತು ಆಕ್ಸಲ್ಗೆ ಗ್ರೀಸ್ ಮಾಡುವುದು ಸೇರಿದಂತೆ ಅನೇಕ ಕೆಲಸವನ್ನು ನಾನು ಈಗ ನಿಭಾಯಿಸುತ್ತೇನೆ, ಆದರೂ ಇದು ಆರಂಭದಲ್ಲಿ ಕಠಿಣವೆಂದು ತೋರುತ್ತಿತ್ತು. ಈಗ ಎಲ್ಲವೂ ಸರಾಗವಾಗಿ ನಡೆಯುತ್ತಿದೆ. ನಾವು ಗ್ರಾಹಕರಿಗೆ ದಿನದ 24 ಗಂಟೆಯು ಸೇವೆ ಸಲ್ಲಿಸುತ್ತೇವೆ” ಎಂದು ಆದಿಲಕ್ಷ್ಮಿ ಹೇಳುತ್ತಾರೆ.
ಕುಟುಂಬ ಮತ್ತು ಕೆಲಸ ಎರಡನ್ನೂ ಅತ್ಯುತ್ತಮ ರೀತಿಯಲ್ಲಿ ಬ್ಯಾಲೆನ್ಸ್ ಮಾಡುವ ಅದಿಲಕ್ಷೀ ಮಹಿಳಾ ಸಬಲೀಕರಣಕ್ಕೆ ಒಂದು ಉದಾಹರಣೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.