ಬೆಂಗಳೂರು: ಹಾಲಿನ ಪ್ಯಾಕೆಟ್ಗಳನ್ನು ಗ್ರಾಹಕರ ಮನೆ ಬಾಗಿಲಿಗೆಯೇ ತಲುಪಿಸುವ ನಿಟ್ಟಿನಲ್ಲಿ ಕೆಎಂಎಫ್ ಡೋರ್ ಡೆಲಿವರಿ ನೀಡಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಮದರ್ ಡೈರಿಯ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು ನಂದಿನಿ ಆನ್ ವೀಲ್ಸ್ ಸೇವೆಯನ್ನು ಪ್ರಾರಂಭ ಮಾಡಿದೆ. ಈ ಸೇವೆಯಿಂದಾಗಿ ಗ್ರಾಹಕರು ಮಿಲ್ಕ್ ಬೂತ್ಗೆ ತೆರಳುವುದು ತಪ್ಪಲಿದೆ. ಇಂದಿನಿಂದ ತೊಡಗಿದಂತೆ ಯಲಹಂಕ ಝೋನ್ನಲ್ಲಿ ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭ ಮಾಡಲಾಗುವುದು ಎಂದು ಕೆಎಂಎಫ್ ಮಾಹಿತಿ ನೀಡಿದೆ. ಹಾಲಿನ ವಾಹನಗಳು ಬೆಳಗ್ಗೆ 9 ರಿಂದ ರಾತ್ರಿ 8 ರ ವರೆಗೆ ಈ ಭಾಗದಲ್ಲಿ ಸಂಚರಿಸಲಿವೆ.
ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ಇಂತಹ 8 ಟ್ರಕ್ಗಳು ಸಂಚಾರ ನಡೆಸುತ್ತಿವೆ. ಮಂಗಳೂರು, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯದ ಇನ್ನಿತರ ಹಾಲಿನ ಒಕ್ಕೂಟಗಳು ಇದನ್ನು ನಡೆಸುತ್ತಿವೆ. ಈ ಸೇವೆ ಯಲಹಂಕದಲ್ಲಿ ಯಶಸ್ವಿಯಾದಲ್ಲಿ ಇನ್ನಿತರ ಕಡೆಗಳಲ್ಲಿಯೂ ಈ ಸೇವೆಯನ್ನು ನೀಡಲಾಗುವುದಾಗಿಯೂ ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನಷ್ಟು ಟ್ರಕ್ ಖರೀದಿಸುವ ಯೋಜನೆ ಇರುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಿಲ್ಕ್ ಪಾರ್ಲರ್ಗಳಿರುವ ಕಾರಣದಿಂದ ಈ ರೀತಿಯ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.