ಸುರತ್ಕಲ್: ಕೊರೋನಾ ಹೊಡೆತದಿಂದ ದೇಶ ಸಾಕಷ್ಟು ಕಷ್ಟ ನಷ್ಟ ಅನುಭವಿಸಿದರೂ ಇದೀಗ ದೇಶದಲ್ಲಿ ವ್ಯಾಕ್ಸಿನ್ ಬಳಕೆ ಆರಂಭವಾಗಿರುವುದರಿಂದ 2ನೇ ಕೊರೊನಾ ಅಲೆಯನ್ನು ನಿಭಾಯಿಸಲು ದೇಶ ಸಶಕ್ತವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ವಿರುದ್ದ ಆರಂಭವಾದ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರ ಸೇವೆಗೈಯುವ ಕೊರೋನಾ ವಾರಿಯರ್ಸ್ಗೆ ಪ್ರಥಮ ಆದ್ಯತೆ ನೀಡಲಾಗಿದೆ. ಹಂತ ಹಂತವಾಗಿ ಸರ್ವರಿಗೂ ವ್ಯಾಕ್ಸಿನ್ ದೊರಕುವಂತಾಗಲು ಕ್ರಮ ಕೈಗೊಳ್ಳುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ. ವ್ಯಾಕ್ಸಿನ್ ವಿರುದ್ದ ಯಾವುದೇ ಸಂದೇಹ ಬೇಡ, ಹಲವು ಸುತ್ತಿನ ಪರೀಕ್ಷೆಯ ಬಳಿಕವೇ ಸುರಕ್ಷಿತ ಎಂದು ಕಂಡುಕೊಂಡ ಬಳಿಕ ಇದೀಗ ಕೊರೊನಾ ವಿರುದ್ದ ಲಸಿಕೆ ಅಭಿಯಾನ ಆರಂಭವಾಗಿದೆ. ಇರುವ ಸುರಕ್ಷತಾ ಕ್ರಮಗಳನ್ನು ಮುಂದುವರೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಮಾಸ್ಕ್, ಸಾಮಾಜಿಕ ಅಂತರ ,ಕೈಯನ್ನು ಸ್ವಚ್ಚವಾಗಿಟ್ಟುಕೊಳ್ಳುವ ಅಭ್ಯಾಸವನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.
ಪಾಲಿಕೆ ಸದಸ್ಯೆ ನಯನ ಕೋಟ್ಯಾನ್, ಸರಿತ ಶಶಿಧರ್, ಶೋಭಾ ರಾಜೇಶ್, ಲಕ್ಷ್ಮೀ ಶೇಖರ್ ದೇವಾಡಿಗ, ಶ್ವೇತಾ ಪೂಜಾರಿ, ಶಂಶಾದ್, ಜಿಲ್ಲಾ ಮಲೇರಿಯಾ ನಿಯಂತ್ರಣ ವಿಭಾಗದ ಡಿಎಂಒ ಡಾ. ನವೀನ್ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ ,ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ದ ಡಾ. ಕತಿಜಾ ಶಲುಲಾ, ಆಡಳಿತ ವಿಭಾಗದ ಭಾಸ್ಕರ್ ಕೋಟ್ಯಾನ್, ಎಲ್ ಎಚ್ ಎ ವಿಜಯ, ಡಿಎಚ್ಇಒ ಆಲಿಯಮ್ಮ , ಸಿಟಿ ಪ್ರೋಗ್ರಾಂ ಮ್ಯಾನೇಜರ್ ಪಯಸ್ಬಿನಿ, ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿಯ ಒಟ್ಟು 100 ಮಂದಿಗೆ ಕೊರಿನಾ ಲಸಿಕೆ ಹಾಕಲಾಯಿತು. ಮುಂಜಾಗ್ರತಾ ಕ್ರಮವಾಗಿ ಲಸಿಕೆ ನಿಗಾ ಘಟಕ, ಆಕ್ಸಿಜನ್ ವ್ಯವಸ್ಥೆ, ಅಂಬುಲೆನ್ಸ್ ಮತ್ತಿತರ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.