ನವದೆಹಲಿ: ದೇಶದ ವಿಪತ್ತು ನಿರ್ವಹಣಾ ಪಡೆ ಎನ್ಡಿಆರ್ಎಫ್ ಈ ವರ್ಷದ ಕೊನೆಯಲ್ಲಿ ವಿಶ್ವಸಂಸ್ಥೆಯಿಂದ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಪ್ರಮಾಣೀಕರಣವನ್ನು ಪಡೆಯುವ ನಿರೀಕ್ಷೆ ಇದೆ. ಹೀಗಾಗಿ ಭಾರತ ಶೀಘ್ರದಲ್ಲೇ ವಿಶ್ವಸಂಸ್ಥೆ (ಯುಎನ್) ಸೂಚಿತ ಅಂತರರಾಷ್ಟ್ರೀಯ ವಿಪತ್ತು ಕಾರ್ಯಾಚರಣೆಯ ಭಾಗವಾಗುವ ಸಾಧ್ಯತೆ ಇದೆ ಎಂದು ಉನ್ನತ ಶ್ರೇಣಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಯುಎನ್ ಅಂಬ್ರೆಲಾ ಅಡಿಯಲ್ಲಿನ 90 ಕ್ಕೂ ಹೆಚ್ಚು ದೇಶಗಳು ಮತ್ತು ಸಂಸ್ಥೆಗಳ ಜಾಲವಾಗಿರುವ ಸ್ವಿಟ್ಜರ್ಲೆಂಡ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ INSARAG (ಅಥವಾ ಅಂತರರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಲಹಾ ತಂಡ) ಎನ್ಡಿಆರ್ಎಫ್ಗೆ ಈ ಮಾನ್ಯತೆಯನ್ನು ನೀಡಲಿದೆ.
“ನಾವು ದೇಶದಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅನ್ನು ಹೊಂದಿರುವಂತೆಯೇ, ಯುಎನ್ ಏಜೆನ್ಸಿ INSARAG ವಿಶ್ವದಾದ್ಯಂತ ವಿಪತ್ತು ಪ್ರತಿಕ್ರಿಯೆ ತಂಡಗಳನ್ನು ಪ್ರಮಾಣೀಕರಿಸುತ್ತದೆ. ಇದು ಅಂತರರಾಷ್ಟ್ರೀಯ ಗೋಲ್ಡ್ ಸ್ಟ್ಯಾಂಡರ್ಡ್ ಆಗಿದೆ” ಎಂದು ಎನ್ಡಿಆರ್ಎಫ್ ಮಹಾನಿರ್ದೇಶಕ ಎಸ್ ಎನ್ ಪ್ರಧಾನ್ ತಿಳಿಸಿದ್ದಾರೆ.
“ನಾವು ಹೆಚ್ಚು ನಿರೀಕ್ಷೆ ಹೊಂದಿದ್ದೇವೆ ಮತ್ತು 2021 ರಲ್ಲಿ ನಾವು ಪ್ರಮಾಣೀಕರಣವನ್ನು ಪಡೆಯುತ್ತೇವೆ ಎಂದು ಆಶಿಸುತ್ತೇವೆ” ಎಂದಿದ್ದಾರೆ.
“ಕೆಲವು ಅನಾಹುತಗಳಿಗೆ ಪ್ರತಿಕ್ರಿಯಿಸಲು ಯುಎನ್ ನಿಂದ ಕರೆ ಇದ್ದರೆ ನಮ್ಮನ್ನು ಕರೆಸಲಾಗುವುದು. ಆಗ ನಾವು ಅಂತರರಾಷ್ಟ್ರೀಯ ಪ್ರತಿಕ್ರಿಯೆ ಪಡೆಯುತ್ತೇವೆ” ಎಂದು ಪ್ರಧಾನ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.