ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ತಪ್ಪಿಸುವ ನಕಲಿ ಇನ್ವಾಯ್ಸ್ ದಂಧೆಗಳ ವಿರುದ್ಧ ಸರಕಾರ ಸಮರ ಸಾರಿದ್ದು, 215 ಜನರನ್ನು ಬಂಧಿಸಿದೆ. ನವೆಂಬರ್ ಮಧ್ಯದಿಂದ 6600 ಕ್ಕೂ ಹೆಚ್ಚು ನಕಲಿ ಘಟಕಗಳನ್ನು ಪತ್ತೆಹಚ್ಚಿದೆ.
ಇಲ್ಲಿಯವರೆಗೆ ಬಂಧಿಸಲ್ಪಟ್ಟವರಲ್ಲಿ ಕೆಲವು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಸೇರಿದ್ದಾರೆ. ಬಂಧಿತ ವ್ಯಕ್ತಿಗಳಲ್ಲಿ ಕಮಿಷನ್ ಆಧಾರದ ಮೇಲೆ ನಕಲಿ ಇನ್ವಾಯ್ಸ್ಗಳನ್ನು ನೀಡುವ ನಕಲಿ ಘಟಕಗಳ ನಿರ್ವಾಹಕರು ಮತ್ತು ಅಂತಹ ಇನ್ವಾಯ್ಸ್ಗಳನ್ನು ಬಳಸುವ ಫಲಾನುಭವಿಗಳು ಸೇರಿದ್ದಾರೆ. ಇದರಲ್ಲಿ 81 ಮಾಲೀಕರು, 36 ನಿರ್ದೇಶಕರು ಅಥವಾ ವ್ಯವಸ್ಥಾಪಕ ನಿರ್ದೇಶಕರು, 15 ಪಾಲುದಾರರು, ಮೂವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಆರು ಚಾರ್ಟರ್ಡ್ ಅಕೌಂಟೆಂಟ್ಗಳು, ಕಂಪನಿಯ ಕಾರ್ಯದರ್ಶಿ, ಬ್ರೋಕರ್ ಮತ್ತು ಜಿಎಸ್ಟಿ ಪ್ರಾಕ್ಟಿಷನರ್ ಸೇರಿದ್ದಾರೆ.
ಈವರೆಗೆ ಜಿಎಸ್ಟಿ ಅಧಿಕಾರಿಗಳು ಸುಮಾರು 2,200 ಪ್ರಕರಣಗಳನ್ನು ದಾಖಲಿಸಿದ್ದು, ಭಾಗಿಯಾಗಿರುವ ಜನರಿಂದ 700 ಕೋಟಿ ರೂ. ವಸೂಲಿ ಮಾಡಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಉಡುಪುಗಳು, ತಾಮ್ರ ತ್ಯಾಜ್ಯ ಸ್ಕ್ರ್ಯಾಪ್, ಔಷಧಿಗಳು, ಫೆರಸ್ ತ್ಯಾಜ್ಯ ಮತ್ತು ಸ್ಕ್ರ್ಯಾಪ್, ಸಿಮೆಂಟ್ ಮತ್ತು ಕಲ್ಲಿದ್ದಲಿನ ವ್ಯವಹಾರಗಳ ಬಗ್ಗೆ ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸಲಾಗಿದೆ.
ಅಂತಹ ಪ್ರಕರಣಗಳನ್ನು ಗುರುತಿಸಲು ಅಧಿಕಾರಿಗಳು ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.