ಬಾಗಲಕೋಟೆ: ಮುಧೋಳ ಶ್ವಾನ ಕರ್ನಾಟಕದ ಜೊತೆಗೆ ಇಡೀ ದೇಶದಲ್ಲೇ ಹೆಚ್ಚು ಪ್ರಖ್ಯಾತಿ ಪಡೆದಿರುವ ಶ್ವಾನ ತಳಿ. ಭಾರತೀಯ ಸೇನೆಯಲ್ಲಿಯೂ ಮುಧೋಳ ಶ್ವಾನಗಳು ಸದ್ದು ಮಾಡುತ್ತಿದ್ದು, ಇದೀಗ ಭಾರತೀಯ ವಾಯುಸೇನೆಯಲ್ಲಿಯೂ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧಗೊಳ್ಳುತ್ತಿವೆ.
ಸಣಕಲು ದೇಹವಾದರೂ, ಸೂಕ್ಷ್ಮ ಗ್ರಹಿಕೆಯ ಶಕ್ತಿಯನ್ನು ಹೊಂದಿರುವ ಮುಧೋಳ ಶ್ವಾನಗಳು ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ, ತಮ್ಮದೇ ಆದ ಛಾಪು ಮೂಡಿಸಿವೆ. ಅವುಗಳ ಸಾಮರ್ಥ್ಯವನ್ನು ಗ್ರಹಿಸಿರುವ ಭಾರತೀಯ ರಕ್ಷಣಾ ಇಲಾಖೆ ವಾಯುಸೇನೆಯಲ್ಲಿಯೂ ಇವುಗಳನ್ನು ಬಳಕೆ ಮಾಡಲು ಮುಂದಾಗಿವೆ. ಉತ್ತರ ಪ್ರದೇಶದ ಆಗ್ರಾದ ಏರ್ಫೋರ್ಸ್ ಕೇಂದ್ರದಿಂದ ಬಾಗಲಕೋಟೆ ಜಿಲ್ಲೆಯ ತಿಮ್ಮಾಪೂರ ಮುಧೋಳ ಶ್ವಾನ ಸಂವರ್ಧನಾ ಕೇಂದ್ರಕ್ಕೂ 6 ಶ್ವಾನಗಳನ್ನು ನೀಡುವಂತೆ ವಾಯುಸೇನೆ ಬೇಡಿಕೆ ಇರಿಸಿದೆ ಎಂದೂ ವರದಿಗಳು ಮಾಹಿತಿ ನೀಡಿವೆ.
ಈ ಬಾರಿ ವಾಯುಸೇನೆಗೆ ಕೇವಲ 4 ಮುಧೋಳ ಶ್ವಾನದ ಮರಿಗಳನ್ನು ಮಾತ್ರ ನೀಡಲಾಗುತ್ತಿದೆ. 2 ಗಂಡು ಮತ್ತು 2 ಹೆಣ್ಣು ನಾಯಿಮರಿಗಳನ್ನು ನೀಡಲಾಗುವುದು. ಒಪ್ಪಂದ ಮಾಡಿಕೊಂಡಂತೆ ಮತ್ತೆ ಮೂರು ಮುಧೋಳ ಶ್ವಾನಗಳನ್ನು ಮುಂದಿನ ವರ್ಷ ವಾಯುಸೇನೆಗೆ ಒದಗಿಸಲಾಗುವುದು ಎಂದು ಸಂವರ್ಧನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ನಾಯಿಗಳನ್ನು ಪಡೆಯುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಮುಧೋಳ ಶ್ವಾನಗಳು ರಾಜ್ಯದ ಪೊಲೀಸ್ ಇಲಾಖೆ, ಭಾರತೀಯ ಸೇನೆ, ಸಿಆರ್ಪಿಎಫ್, ಬಿಎಸ್ಎಫ್, ಇಂಡೋ-ತಾಲೀಬಾನ್ ಗಡಿ ಪೊಲೀಸ್ ಪಡೆಯಲ್ಲಿ ,ಕೇರಳ, ಅಸ್ಸಾಂ, ತಮಿಳುನಾಡಿನಲ್ಲಿಯೂ ಸೇವೆ ಸಲ್ಲಿಸುತ್ತಿರುವುದಾಗಿ ಸಂವರ್ಧನಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.