ಬೆಂಗಳೂರು: ಮದುವೆ ಸೇರಿದಂತೆ ಇನ್ನಿತರ ವಿಶೇಷ ಸಂದರ್ಭಗಳಿಗೆ ಪ್ರಯಾಣಕ್ಕಾಗಿ ಕೆಎಸ್ಆರ್ಟಿಸಿ ಬಸ್ಸುಗಳನ್ನು ಕಾಯ್ದಿರಿಸುವ ಜನರಿಗೆ ಸಂಸ್ಥೆ ಬಂಪರ್ ಆಫರ್ ನೀಡಿದೆ. 2021 ರ ಆರಂಭದಲ್ಲಿಯೇ ಸಮಾರಂಭಗಳಿಗಾಗಿ ಬುಕ್ ಮಾಡುವ ಬಸ್ಸುಗಳ ದರವನ್ನು ಕಡಿತಗೊಳಿಸಿರುವುದಾಗಿ ತಿಳಿಸಿದೆ.
ಈ ಸಂಬಂಧ ಸಂಸ್ಥೆ ಅಧಿಕೃತ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ದರ ಪಟ್ಟಿಯನ್ನು ಟ್ವೀಟರ್ನಲ್ಲಿ ಹಂಚಿಕೊಂಡಿದೆ. ಮದುವೆ, ಪ್ರವಾಸ ಮತ್ತು ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಬಸ್ಸುಗಳನ್ನು ಒಪ್ಪಂದದ ಮೇಲೆ ನೀಡಲಾಗುತ್ತಿದ್ದು, ಇದರ ದರವನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಿದೆ.
ಹೊರ ದರ ಪಟ್ಟಿಯ ಅನ್ವಯ 47 ರಿಂದ 49 ಜನರಿಗೆ ಕುಳಿತುಕೊಳ್ಳುವುದಕ್ಕೆ ಸಾಧ್ಯತೆ ಇರುವ ಐರಾವತ ಮಲ್ಟಿ ಆಕ್ಸೆಲ್ ಬಸ್ಸುಗಳ ದರದಲ್ಲಿ ಪ್ರತಿ ಕಿ. ಮೀ. ಗೆ 5 ರಿಂದ 10 ರೂ ವರೆಗೆ ಇಳಿಕೆ ಮಾಡಲಾಗಿದೆ. 32 ಆಸನಗಳ ಎಸಿ ಸ್ಲೀಪರ್ ಬಸ್ಸುಗಳಲ್ಲಿ ಒಪ್ಪಂದದ ಮೇರೆಗೆ ಪ್ರತಿ ಕಿ. ಮೀ. ಗೆ 5 ರಿಂದ 6 ರೂ ವರೆಗೆ ಇಳಿಕೆ ಮಾಡಲಾಗಿದೆ. ಹಾಗೆಯೇ 40 ಆಸನಗಳ ಫ್ಲೈ ಬಸ್ಸಿನ ಒಪ್ಪಂದ ದರ ಪ್ರತಿ ಕಿ. ಮೀ. ಗೆ 10 ರಿಂದ 16 ರೂ. ಗಳ ವರೆಗೆ ಇಳಿಕೆ ಮಾಡಲಾಗಿರುವುದಾಗಗಿ ಕೆಎಸ್ಆರ್ಟಿಸಿ ಮಾಹಿತಿ ನೀಡಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳನ್ನು ಸಮಾರಂಭಗಳಿಗೆ ತೆರಳಲು ಆಯ್ಕೆ ಮಾಡುವಂತಾಗಬೇಕು ಎಂಬ ಹಿನ್ನೆಲೆಯಲ್ಲಿ ದರ ಕಡಿತ ಗೊಳಿಸಿರುವುದಾಗಿಯೂ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.