ನವದೆಹಲಿ: ಕೋವಿಡ್ -19 ವಿರುದ್ಧದ ಲಸಿಕೆ ಹಾಕುವ ಉತ್ತಮ ವಿಧಾನದ ಕಂಡುಕೊಳ್ಳುವಿಕೆ ಮತ್ತು ಕಾರ್ಯದಲ್ಲಿ ಯಾವುದೇ ಲೋಪದೋಷಗಳನ್ನು ಪರೀಕ್ಷಿಸುವ ಎರಡನೇ ಡ್ರೈ ರನ್ ಇಂದು ದೇಶದಾದ್ಯಂತ ನಡೆಯಲಿದ್ದು, ಮೊದಲ ಹಂತದಲ್ಲಿ ಭಾಗವಹಿಸಿದ ರಾಜ್ಯಗಳಿಗೆ ಈ ಹಂತದಿಂದ ವಿನಾಯಿತಿ ನೀಡಲಾಗುತ್ತಿದೆ.
ಮೊದಲ ಬೃಹತ್ ಡ್ರೈ ರನ್ ಅನ್ನು ಜನವರಿ 2 ರಂದು ನಡೆಸಲಾಯಿತು.
ಇಂದು 33 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 736 ಜಿಲ್ಲೆಗಳ ಮೂರು ಸೆಷನ್ಗಳಲ್ಲಿ ರಾಷ್ಟ್ರವ್ಯಾಪಿ ಇಂದು ಡ್ರಿಲ್ ನಡೆಯಲಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಅರುಣಾಚಲ ಪ್ರದೇಶ ಈ ಡ್ರೈ ರನ್ನಲ್ಲಿ ಭಾಗವಹಿಸುವುದಿಲ್ಲ, ಏಕೆಂದರೆ ಈ ರಾಜ್ಯಗಳು ಈಗಾಗಲೇ ಡ್ರೈ ರನ್ ನಡೆಸಿವೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ನ ಎರಡು ಲಸಿಕೆಗಳ ತುರ್ತು ಬಳಕೆಗಾಗಿ ಭಾರತ ಈಗಾಗಲೇ ಅನುಮೋದನೆ ನೀಡಿದೆ. ಶೀಘ್ರದಲೇ ವ್ಯಾಕ್ಸಿನೇಷನ್ ಕಾರ್ಯ ಜಾರಿಗೆ ಬರಲಿದೆ.
ಕೋವಿಡ್-19 ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ವದಂತಿಗಳು ಮತ್ತು ತಪ್ಪು ಮಾಹಿತಿ ನೀಡುವ ಅಭಿಯಾನಗಳ ವಿರುದ್ಧ ಜಾಗರೂಕರಾಗಿರಬೇಕು ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
“ನೈಜ ಲಸಿಕಾ ಕಾರ್ಯವನ್ನು ಸಮರ್ಪಕವಾಗಿ ನಡೆಸುವುದು ಕೋವಿಡ್-19 ವ್ಯಾಕ್ಸಿನೇಷನ್ನ ಅಣಕು ಡ್ರಿಲ್ನ ಉದ್ದೇಶವಾಗಿದೆ ” ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.