ನವದೆಹಲಿ: ಪ್ರತಿ ಚದರ ಕಿಲೋಮೀಟರಿಗೆ 657 ಸಿಸಿಟಿವಿಗಳನ್ನು ಹೊಂದಿರುವ ಚೆನ್ನೈ ವಿಶ್ವದಲ್ಲೇ ಅತಿ ಹೆಚ್ಚು ಸಿಸಿಟಿವಿ ಕಣ್ಗಾವಲು ಹೊಂದಿರುವ ನಗರ ಎಂಬ ದಾಖಲೆ ಮಾಡಿದೆ. ಎರಡನೇ ಸ್ಥಾನವನ್ನು ಕೂಡ ಭಾರತೀಯ ನಗರವಾದ ಹೈದರಾಬಾದ್ ಪಡೆದುಕೊಂಡಿದೆ. ಇಲ್ಲಿ ಪ್ರತಿ ಚದರ ಕಿಲೋಮೀಟರಿಗೆ 480 ಸಿಸಿಟಿವಿಗಳು ಇವೆ.
ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ನ ಸರ್ಫ್ಶಾರ್ಕ್ನ ವಾರ್ಷಿಕ ವರದಿ ಈ ಮಾಹಿತಿಯನ್ನು ನೀಡಿದೆ.
ವಿಶ್ವದ 130ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳನ್ನು ಪರಿಶೀಲಿಸಿರುವ ವಿಪಿಎನ್, ಅವುಗಳಲ್ಲಿ ಯಾವುದು ಹೆಚ್ಚು ಸಿಸಿಟಿವಿ ನೆಟ್ವರ್ಕ್ಗಳನ್ನು ಹೊಂದಿದೆ ಎಂಬುದನ್ನು ಪರೀಕ್ಷಿಸಿತು. ರಾಷ್ಟ್ರ ರಾಜಧಾನಿಯಾದ ನವದೆಹಲಿ ಈ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು, ಇಲ್ಲಿ ಪ್ರತಿ ಚದರ ಕಿಲೋಮೀಟರಿಗೆ 289 ಸಿಸಿಟಿವಿಗಳಿವೆ.
ಚೀನಾದ ಆರು ನಗರಗಳು ಹೆಚ್ಚಿನ ಸಿಸಿಟಿವಿಯೊಂದಿಗೆ ಅಗ್ರ 10 ನಗರಗಳಲ್ಲಿ ಸ್ಥಾನ ಪಡೆದಿವೆ.
ಸಿಸಿಟಿವಿ ಕ್ಯಾಮೆರಾಗಳು ಜಗತ್ತಿನಾದ್ಯಂತ ನಗರಗಳಲ್ಲಿ ಪ್ರಚಲಿತದಲ್ಲಿವೆ, ಆದರೂ, ಕ್ಯಾಮೆರಾಗಳು ಪ್ರತಿಯೊಂದು ನಡೆಯನ್ನೂ ಗುರುತಿಸುತ್ತಿವೆ ಎಂದಿಲ್ಲ, ಸಾಮಾನ್ಯವಾಗಿ, ಸಿಸಿಟಿವಿ ಕ್ಯಾಮೆರಾಗಳು ಸ್ಥಿರ ಸ್ಥಾನದಲ್ಲಿರುತ್ತವೆ ಮತ್ತು ಮುಖ ಗುರುತಿಸುವಿಕೆಯ ತಂತ್ರಜ್ಞಾನ ಸಾರ್ವತ್ರಿಕವಾಗಿಲ್ಲ. ಸಿಸಿಟಿವಿ ಕ್ಯಾಮೆರಾಗಳ ಸಂಖ್ಯೆಯು ನಗರದ ಅಪರಾಧ ಪ್ರಮಾಣವನ್ನು ಸಹ ನಿರ್ಧರಿಸುವುದಿಲ್ಲ ಎಂದು ವಿಪಿಎನ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.