ನವದೆಹಲಿ: ಅಮೆರಿಕಾದ ನಿರ್ಗಮನವಾಗುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ವಾಷಿಂಗ್ಟನ್ನಲ್ಲಿ ದೊಡ್ಡ ಮಟ್ಟದ ದಾಂಧಲೆಯನ್ನು ನಡೆಸುತ್ತಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಕ್ರಮಬದ್ಧ ಮತ್ತು ಶಾಂತಿಯುತ ಅಧಿಕಾರ ವರ್ಗಾವಣೆ ಮುಂದುವರಿಯಬೇಕು” ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
“ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸಾಚಾರದ ಸುದ್ದಿಗಳನ್ನು ನೋಡಿ ಬೇಸರಗೊಂಡಿದ್ದೇನೆ. ಕ್ರಮಬದ್ಧ ಮತ್ತು ಶಾಂತಿಯುತವಾಗಿ ಅಧಿಕಾರ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಚುನಾಯಿತ ಅಧ್ಯಕ್ಷ ಜೋ ಬೈಡನ್ ಮತ್ತು ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಚುನಾವಣಾ ವಿಜಯವನ್ನು ಪ್ರಮಾಣೀಕರಿಸಲು ಶಾಸಕರು ಚುನಾವಣಾ ಕಾಲೇಜು ಮತಗಳನ್ನು ಎಣಿಸುತ್ತಿದ್ದಂತೆ ಟ್ರಂಪ್ ಪರ ಪ್ರತಿಭಟನಾಕಾರರು ಕ್ಯಾಪಿಟಲ್ ಹೊರಗೆ ಬ್ಯಾರಿಕೇಡ್ಗಳನ್ನು ಮುರಿದು ಒಳಗೆ ನುಗ್ಗಿದ್ದರಿಂದ ಯುಎಸ್ ರಾಜಧಾನಿಯನ್ನು ಬುಧವಾರ ಲಾಕ್ ಮಾಡಬೇಕಾಯಿತು. ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ವರದಿಗಳು ತಿಳಿಸಿವೆ.
ಟ್ರಂಪ್ ಪರ ಗಲಭೆಕೋರರು ಕಿಟಕಿಗಳನ್ನು ಒಡೆದಿದ್ದು, ರಾಫ್ಟರ್ಗಳ ಮೇಲೆ ಹತ್ತಿದ್ದಾರೆ, ಯು.ಎಸ್. ಧ್ವಜಗಳನ್ನು ಕಿತ್ತುಹಾಕಿದ್ದಾರೆ ಮತ್ತು ಸೆನೆಟ್ ಕೊಠಡಿಯಲ್ಲಿ ತಿರುಗಾಡಿದ್ದಾರೆ ಎಂಬುದನ್ನು ವೀಡಿಯೊಗಳು ತೋರಿಸಿವೆ.
Distressed to see news about rioting and violence in Washington DC. Orderly and peaceful transfer of power must continue. The democratic process cannot be allowed to be subverted through unlawful protests.
— Narendra Modi (@narendramodi) January 7, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.