ಜಮ್ಮು: ಸತತ ನಾಲ್ಕನೇ ದಿನವೂ ಜಮ್ಮು-ಶ್ರೀನಗರದ ಹೆದ್ದಾರಿ ಬಂದ್ ಆಗಿದ್ದು, ಸುಮಾರು 600ಕ್ಕೂ ಅಧಿಕ ಪ್ರಯಾಣಿಕ ವಾಹನಗಳು ದಾರಿ ಮಧ್ಯೆ ಸಿಕ್ಕಿ ಹಾಕಿಕೊಂಡಿವೆ.
ವಿಪರೀತವಾಗಿ ಸುರಿಯುತ್ತಿರುವ ಮಳೆ ಮತ್ತು ಅಲ್ಲಲ್ಲಿ ಸಮಭವಿಸುತ್ತಿರುವ ಭೂಕುಸಿತಗಳ ಕಾರಣದಿಂದಾಗಿ ಹೆದ್ದಾರಿಯನ್ನು ಮುಚ್ಚಲಾಗಿದೆ. ಯಾವುದೇ ಹೊಸ ಟ್ರಾಫಿಕ್ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಡುತ್ತಿಲ್ಲ. ಜಮ್ಮುವಿನಿಂದ ಕಾಶ್ಮೀರಕ್ಕೆ ಆಗಮಿಸುತ್ತಿರುವ ನೂರಾರು ವಾಹನಗಳು ಕಳೆದ 3 ದಿನಗಳಿಂದ ನಿಂತಲ್ಲೇ ನಿಂತಿವೆ. ತಮ್ಮನ್ನು ಎಲಿಕಾಫ್ಟರ್ ಮೂಲಕ ಇಲ್ಲಿಂದ ಸಾಗಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.
ಜಮ್ಮು, ಉಧಮ್ಪುರ್, ಬನಿಹಾಲ್, ರಾಂಬನ್, ಬಟೋಟೆ ಮತ್ತು ಪಟ್ನಿಟಾಪ್ನಲ್ಲಿ ಸುಮಾರು 700ರಿಂದ 800 ಟ್ರಕ್ಗಳು ಮಾರ್ಗಮಧ್ಯೆ ಸಿಕ್ಕಿಹಾಕಿವೆ. ಹೆದ್ದಾರಿ ಎ.1ರಿಂದ ಬಂದ್ ಆಗಿದೆ, ಬಾರ್ಡರ್ ರೋಡ್ಸ್ ಅರ್ಗನೈಸೇಶನ್ನ ಸಿಬ್ಬಂದಿಗಳು ಟ್ರಾಫಿಕ್ ಕ್ಲಿಯರ್ ಮಾಡುವುದಕ್ಕಾಗಿ ಅವಿರತ ಹೋರಾಟ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.