ಲಕ್ನೋ: ಲಕ್ನೋ ವಿಶ್ವವಿದ್ಯಾಲಯ (ಎಲ್ಯು) ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳಿಗೆ ಪಾರ್ಟ್-ಟೈಮ್ ಉದ್ಯೋಗಗಳನ್ನು ನೀಡುವ ‘ಕರ್ಮಯೋಗಿ ಯೋಜನೆ’ ಯನ್ನು ಪ್ರಾರಂಭಿಸಲಾಗಿದೆ. ಉದ್ಯೋಗ ಮಾಡುತ್ತಾ ಶಿಕ್ಷಣ ಮುಂದುವರೆಸಲು ಇದು ಸಹಾಯ ಮಾಡಲಿದೆ.
ಎಲ್ಯು ಉಪಕುಲಪತಿ ಪ್ರೊ. ಅಲೋಕ್ ಕುಮಾರ್ ರಾಯ್ ಮಂಗಳವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಕರ್ಮಯೋಗಿ ಯೋಜನೆ’ ಮೂಲಕ ವಿದ್ಯಾರ್ಥಿಯು ವರ್ಷದಲ್ಲಿ ಗರಿಷ್ಠ 15 ಸಾವಿರ ರೂ.ಸಂಪಾದಿಸಬಹುದು ಎಂದಿದ್ದಾರೆ.
“ವಿದ್ಯಾರ್ಥಿ ಕೇಂದ್ರಿತ ರಚನಾತ್ಮಕ ಚೌಕಟ್ಟನ್ನು ಸ್ಥಾಪಿಸಲು ಲಕ್ನೋ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ನಾವು ವಿವಿಧ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ‘ಕರ್ಮಯೋಗಿ ಯೋಜನೆ’ ಮೂಲಕ ವಿದ್ಯಾರ್ಥಿಗೆ ದಿನಕ್ಕೆ ಗರಿಷ್ಠ 2 ಗಂಟೆಗಳ ಕಾಲ ಗರಿಷ್ಠ 50 ದಿನಗಳವರೆಗೆ ಕೆಲಸ ಮಾಡಲು ಅವಕಾಶವಿರುತ್ತದೆ. ಅವರ ತರಗತಿಯ ನಂತರ ಅವರು ಕೆಲಸ ಮಾಡಬಹುದು. ಅವರಿಗೆ ಗಂಟೆಗೆ 150 ರೂ. ನೀಡಲಾಗುವುದು. ಒಬ್ಬ ವಿದ್ಯಾರ್ಥಿಯು ವರ್ಷದಲ್ಲಿ ಗರಿಷ್ಠ 15,000 ರೂ. ಪಡೆಯಬಹುದು “ಎಂದಿದ್ದಾರೆ.
ಈಗಿನಂತೆ ಈ ಯೋಜನೆಯು ತನ್ನ ಕ್ಯಾಂಪಸ್ನಲ್ಲಿ ಕಲಿಯುತ್ತಿರುವ ಎಲ್ಯು ವಿದ್ಯಾರ್ಥಿಗಳಿಗೆ ಮಾತ್ರ ಇದೆ ಎಂದು ಎಂದಿದ್ದಾರೆ.
“ಈಗಿನಂತೆ, ‘ಕರ್ಮಯೋಗಿ ಯೋಜನೆ’ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮಾತ್ರ ಮತ್ತು ಅಂಗಸಂಸ್ಥೆ ಕಾಲೇಜುಗಳು ತಮ್ಮ ಸ್ವಂತ ಮಟ್ಟದಲ್ಲಿ ಇಂತಹ ಉಪಕ್ರಮವನ್ನು ಪ್ರಾರಂಭಿಸಬೇಕು ಎಂದು ನಾನು ಬಯಸುತ್ತೇನೆ” ಎಂದಿದ್ದಾರೆ.
ಈ ಯೋಜನೆಯು “ದೂರಗಾಮಿ ಪರಿಣಾಮಗಳನ್ನು” ಉಂಟುಮಾಡುತ್ತದೆ ಎಂದು ರಾಯ್ ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.