ಮುಂಬಯಿ: ಭಯೋತ್ಪಾದನೆಯನ್ನು ಹಾಸ್ಯದ ಎಳೆಯಲ್ಲಿ ತೋರಿಸಿರುವ ಬಾಲಿವುಡ್ ಸಿನಿಮಾ ಬಂಗೀಸ್ತಾನಕ್ಕೆ ಪಾಕಿಸ್ಥಾನ ಮತ್ತು ಯುಎಇನಲ್ಲಿ ನಿಷೇಧ ಹೇರಲಾಗಿದೆ.
ರಿತೇಶ್ ದೇಶ್ಮುಖ್, ಪುಲ್ಕೀತ್ ಸಮ್ರಾಟ್ ಅಭಿನಯದ ಈ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಭಯೋತ್ಪಾದನೆಯನ್ನು ಹಾಸ್ಯದ ನೆಲೆಯಲ್ಲಿ ತೋರಿಸಿರುವ ವಿಭಿನ್ನ ಪ್ರಯತ್ನದ ಸಿನಿಮಾ ಇದೆಂದು ಹೇಳಲಾಗಿದೆ.
ಇದೀಗ ಈ ಸಿನಿಮಾಕ್ಕೆ ಪಾಕಿಸ್ಥಾನ, ದುಬೈನಲ್ಲಿ ನಿಷೇಧ ಹೇರಿರುವುದಕ್ಕೆ ಚಿತ್ರ ತಂಡ ಆಘಾತ ವ್ಯಕ್ತಪಡಿಸಿದ್ದು, ನಿಷೇಧಕ್ಕೆ ಕಾರಣ ಏನು ಎಂಬುದನ್ನು ಆ ದೇಶದ ಸೆನ್ಸಾರ್ ಮಂಡಳಿ ವಿವರಿಸಬೇಕು ಎಂದಿದೆ.
ಪೋಲ್ಯಾಂಡ್ ಮತ್ತು ಲಡಾಖ್ನಲ್ಲಿ ಸಿನಿಮಾದ ಬಹುತೇಕ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇದು ಇಬ್ಬರು ಸುಸೈಡ್ ಬಾಂಬರ್ಗಳ ನಡುವಣ ಕಥೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.