ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸದರ್ಬನ್ ರೈಲು ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಬಿಐಎಎಲ್ ರೈಲು ನಿಲ್ದಾಣಕ್ಕೆ 12 ಬಸ್ಸುಗಳ ಸೇವೆಯನ್ನು ಆರಂಭ ಮಾಡಿದೆ.
ಈ ಬಸ್ಸುಗಳನ್ನು ಖಾಸಗಿ ಆಪರೇಟರ್ಸ್ ಓಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ತಲಾ ಆರು ಟ್ರಿಪ್ಗಳಲ್ಲಿ ಈ ಸೇವೆಯನ್ನು ನೀಡಲಿವೆ ಎಂದು ಮೂಲಗಳು ತಿಳಿಸಿವೆ. ಮೊದಲ ಬಸ್ ವಿಮಾನ ನಿಲ್ದಾಣದಿಂದ ಬೆಳಗ್ಗೆ 5.25 ಕ್ಕೆ ಹೊರಟು ಬೆಳಗ್ಗೆ 5.45 ಕ್ಕೆ ನಿಲ್ದಾಣವನ್ನು ತಲುಪಲಿದೆ. ಮೊದಲ ಬಸ್ಸುಗಳ ಆಲ್ಫಾ 2, ಮಿನೇಜಸ್, ಏರ್ ಇಂಡಿಯಾ, ಎಸ್ಎಟಿಎಸ್, ಬ್ರಾವೋ ಮತ್ತು ಕಾರ್ಗೋ ವಿಲೇಜ್ನಲ್ಲಿ ನಿಲುಗಡೆ ನೀಡಲಿವೆ. ಕೊನೆಯ ಸಂಚಾರ ರಾತ್ರಿ 9.40 ಮತ್ತು 10 ಗಂಟೆಗೆ ಕೊನೆಗೊಳ್ಳುತ್ತವೆ. ನಿರ್ದಿಷ್ಟ ನಿಗದಿತ ಪ್ರದೇಶಗಳಲ್ಲಿ ಈ ಬಸ್ಸುಗಳು ನಿಲುಗಡೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ 28 ಸಾವಿರ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಬಸ್ಸುಗಳ ಸಂಚಾರ ಸೇವೆಯಿಂದಾಗಿ ಅವರಿಗೆ ಅನುಕೂಲವಾಗಲಿದೆ. ಈ ಬಸ್ಸುಗಳ ವೇಳಾಪಟ್ಟಿಯು ರೈಲಿನ ವೀಳಾಪಟ್ಟಿಯನ್ನು ಆಧರಿಸಿ ಇರಲಿದ್ದು, ಉಚಿತ ಸೇವೆಯನ್ನು ನೀಡಲಿವೆ. ವಿಮಾನ ನಿಲ್ದಾಣಕ್ಕೆ ತೆರಳುವವರಿಗೆಂದೇ ಈ ಸೇವೆ ಆರಂಭಿಸಲಾಗಿದ್ದು, ಪ್ರಯಾಣಿಕರು ಇದರ ಅನುಕೂಲವನ್ನು ಪಡೆದುಕೊಳ್ಳುವಂತೆ ಬಿಐಎಎಲ್ ಮನವಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.