ಬೆಂಗಳೂರು: ಮುಂದಿನ ಸೋಮವಾರದಿಂದ ತೊಡಗಿದಂತೆ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಲ್ಟ್ ಸ್ಟೇಷನ್ ವರೆಗೆ, ಬೆಂಗಳೂರು ರೈಲು ನಿಲ್ದಾಣದಿಂದ ಮೂರು ಜೋಡಿ ರೈಲುಗಳು ಕಾರ್ಯಾರಂಭ ಮಾಡಲಿವೆ.
ಈ ವರೆಗೆ ಏರ್ಪೋರ್ಟ್ಗೆ ತೆರಳಲು ದುಬಾರಿ ವೆಚ್ಚ ಖರ್ಚು ಮಾಡಿ ಟ್ಯಾಕ್ಸಿ, ವಜ್ರ ಬಸ್ಸುಗಳನ್ನು ಅವಲಂಭಿಸುತ್ತಿದ್ದ ಪ್ರಯಾಣಿಕರಿಗೆ ಈ ರೈಲು ಸೌಲಭ್ಯ ಕೊಂಚ ಮಟ್ಟಿನ ನಿರಾಳತೆಯನ್ನು ಒದಗಿಸಲಿದೆ. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಗ್ಗೆ 4.45ರ ವೇಳೆಗೆ ಮೊದಲ ರೈಲು ಸಂಚಾರ ಆರಂಭವಾಗಲಿದ್ದು, ಇದು ಬೆಳಗ್ಗೆ 5.50 ರ ಸುಮಾರಿಗೆ ವಿಮಾನ ನಿಲ್ದಾಣ ತಲುಪಲಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಇದರ ಟಿಕೆಟ್ ವೆಚ್ಚವೂ ಕಡಿಮೆಯಾಗಿದ್ದು, 10-15 ರೂ. ಗಳನ್ನು ಪಾವತಿ ಮಾಡುವ ಮೂಲಕ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗಲಿದೆ.
ಎರಡು ರೈಲುಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಮತ್ತು ಇನ್ನೊಂದು ರೈಲು ಯಲಹಂಕದಿಂದ ದೇವನಹಳ್ಳಿಯ ವರೆಗೆ ಕಾರ್ಯ ನಿರ್ವಹಿಸಲಿದೆ. ರಾತ್ರಿ 9 ರ ವರೆಗೆ ಈ ರೈಲು ಸಂಚಾರ ಇರಲಿದೆ. ದೇವನ ಹಳ್ಳಿಯಿಂದ ಬೆಳಗ್ಗೆ 7 ಗಂಟೆಗೆ ಈ ರೈಲು ಸಂಚಾರ ಆರಂಭವಾಗಲಿದೆ. ಅದರೊಂದಿಗೆ ಬೆಂಗಳೂರು ಕಂಟೋನ್ಮೆಂಟ್ ಮತ್ತು ಬಂಗಾರಪೇಟೆ, ಚಿಕ್ಕಬಳ್ಳಾಪುರ ಮಾರ್ಗವಾಗಿ ಸಂಚರಿಸುವ ಎರಡೂ ರೈಲುಗಳು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲುಗಡೆ ನೀಡಲಿವೆ. ಭಾನುವಾರದ ಹೊರತಾಗಿ ಇತರೆಲ್ಲಾ ದಿನವೂ ಈ ರೈಲುಗಳು ಕಾರ್ಯ ನಿರ್ವಹಿಸಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.