ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೈಟ್ ಹೌಸ್ ಪ್ರಾಜೆಕ್ಟ್ಗಳಿಗೆ ಅಡಿಪಾಯ ಹಾಕಲಿದ್ದಾರೆ. ಈ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಅವರು ಯುವಜನತೆಗೆ ಕರೆ ನೀಡಿದ್ದಾರೆ.
“ಇಂದಿನ ಕಾರ್ಯಕ್ರಮವನ್ನು ಬೆಳಿಗ್ಗೆ 11 ಗಂಟೆಯಿಂದ ವೀಕ್ಷಿಸಲು ನನ್ನ ಯುವ ಸ್ನೇಹಿತರನ್ನು, ವಿಶೇಷವಾಗಿ ವಾಸ್ತುಶಿಲ್ಪ, ಯೋಜನೆ, ನಿರ್ಮಾಣ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿರುವವರನ್ನು ನಾನು ವಿಶೇಷವಾಗಿ ಆಹ್ವಾನಿಸುತ್ತೇನೆ. ವಸತಿ ಮತ್ತು ನಗರ ಕ್ಷೇತ್ರಗಳನ್ನು ಉತ್ತೇಜಿಸಲು ವಿವಿಧ ತಂತ್ರಜ್ಞಾನಗಳ ಕುರಿತು ಸಮೃದ್ಧ ಚರ್ಚೆಗಳನ್ನು ಇದು ಒಳಗೊಂಡಿದೆ” ಎಂದಿದ್ದಾರೆ.
ಲೈಟ್ ಹೌಸ್ ಪ್ರಾಜೆಕ್ಟ್ಗಳು (ಎಲ್ಎಚ್ಪಿಗಳು) ಸಾರ್ವಜನಿಕ ಕಲ್ಯಾಣಕ್ಕಾಗಿ ಬಳಸಲಾಗುವ ಅತ್ಯುತ್ತಮ ತಂತ್ರಜ್ಞಾನವನ್ನು ಪ್ರದರ್ಶಿಸುತ್ತವೆ. ನಮ್ಮ ಅಭಿವೃದ್ಧಿ ಪಥಕ್ಕೆ ಪ್ರಚೋದನೆಯನ್ನು ನೀಡಲು ನಮ್ಮ ರಾಷ್ಟ್ರವು ಅಂತಹ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುತ್ತಿದೆ ಎಂದು ನಿಮಗೆ ಹೆಮ್ಮೆ ಆಗುತ್ತದೆ ಎಂದಿದ್ದಾರೆ..
ಭಾರತದ ನಗರ ಭೂದೃಶ್ಯವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮ ಇದಾಗಿದೆ. ಲೈಟ್ ಹೌಸ್ ಪ್ರಾಜೆಕ್ಟ್ಗಳಿಗೆ ಅಡಿಪಾಯ ಹಾಕಲಿದ್ದೇಬೆ ಮತ್ತು ಪಿಎಂಎವೈ (ಅರ್ಬನ್) ಮತ್ತು ಆಶಾ-ಇಂಡಿಯಾ ಪ್ರಶಸ್ತಿಗಳನ್ನು ವಿತರಿಸಲಿದ್ದೇನೆ ಎಂದಿದ್ದಾರೆ.
I would specially call upon my young friends, especially those in the fields of architecture, planning, construction and related spheres to watch today’s programme 11 AM onwards. It includes rich discussions on various technologies to invigorate the housing and urban sectors. https://t.co/sleTOAuxto
— Narendra Modi (@narendramodi) January 1, 2021
The The Light House Projects (LHPs) will showcase the best forms of technology, used for public welfare. It will make you proud that our nation is leveraging such technology to give an impetus to our development trajectory.
— Narendra Modi (@narendramodi) January 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.