ನವದೆಹಲಿ: ಕೇಂದ್ರ ಸರ್ಕಾರವು UMANG (Unified Mobile Application for New-age Governance) ನ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮೂರು ವರ್ಷಗಳಾಗಿವೆ. ಇದೀಗ ಸರ್ಕಾರವು ಈ ಅಪ್ಲಿಕೇಶನ್ ಪರಿಣಾಮವನ್ನು ತಿಳಿಯಲು ಮುಂದಾಗಿದೆ.
ಈ ಅಪ್ಲಿಕೇಶನ್ ಒಂದೇ ವೇದಿಕೆಯಲ್ಲಿ 2,000 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಒದಗಿಸುತ್ತದೆ ಮತ್ತು ಸುಮಾರು 25 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಎಲ್ಲಾ ಸರ್ಕಾರಿ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ಈ ಆ್ಯಪ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 2017 ರಲ್ಲಿ ಪ್ರಾರಂಭಿಸಿದರು.
ಆದರೆ ಸರ್ಕಾರದ ಉತ್ತೇಜನದ ಹೊರತಾಗಿಯೂ, ಈ ಅಪ್ಲಿಕೇಶನ್ ದೇಶದಲ್ಲಿ 712 ದಶಲಕ್ಷಕ್ಕೂ ಹೆಚ್ಚಿನ ವೈರ್ಲೆಸ್ ಬ್ರಾಡ್ಬ್ಯಾಂಡ್ ಬಳಕೆದಾರರಿಂದ ಅಪೇಕ್ಷಿತ ಬಳಕೆಯನ್ನು ಪಡೆದುಕೊಂಡಿಲ್ಲ. ಈಗ ಮೂರು ವರ್ಷಗಳಿಂದ ಮಾರುಕಟ್ಟೆಯಲ್ಲಿದ್ದರೂ, ಈ ಅಪ್ಲಿಕೇಶನ್ ಇದುವರೆಗೆ 39 ಮಿಲಿಯನ್ ಡೌನ್ಲೋಡ್ಗಳನ್ನು ಮಾತ್ರ ಕಂಡಿದೆ.
ಈಗ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ನಾಗರಿಕರ ದೃಷ್ಟಿಕೋನದಿಂದ ಮತ್ತು ಸರ್ಕಾರಿ ಇಲಾಖೆಗಳಿಂದ ಅಪ್ಲಿಕೇಶನ್ನ ಪ್ರಭಾವದ ಬಗ್ಗೆ ಮೌಲ್ಯಮಾಪನವನ್ನು ಮಾಡಲು ಏಜೆನ್ಸಿಯನ್ನು ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಉಮಂಗ್ ಆ್ಯಪ್ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿಯುವುದು ಇದರ ಉದ್ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.