ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಕೋವಿಡ್-19 ವಿರುದ್ಧ ಬಳಸಲು ಬ್ರಿಟನ್ ಬುಧವಾರ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಕೊರೊನಾವೈರಸ್ ಲಸಿಕೆಯನ್ನು ಅನುಮೋದಿಸಿದೆ. ಕೋವಿಡ್-19 ರ ಹೊಸ ರೂಪಾಂತರದೊಂದಿಗೆ ಆ ದೇಶವು ಹೋರಾಡುತ್ತಿರುವ ಸಮಯದಲ್ಲಿ ಯುಕೆ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.
“ಆಕ್ಸ್ಫರ್ಡ್ ವಿಶ್ವವಿದ್ಯಾಲಯ / ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆಯನ್ನು ಬಳಕೆಗೆ ಅಧಿಕೃತಗೊಳಿಸುವಂತೆ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (MHRA) ಯ ಶಿಫಾರಸನ್ನು ಸರ್ಕಾರ ಇಂದು ಸ್ವೀಕರಿಸಿದೆ” ಎಂದು ಯುಕೆ ಆರೋಗ್ಯ ಸಚಿವಾಲಯ ತಿಳಿಸಿದೆ.
ಯುಕೆ ಸರ್ಕಾರದ ಅನುಮೋದನೆಯು ಭಾರತಕ್ಕೆ ಒಂದು ಒಳ್ಳೆಯ ಸುದ್ದಿಯಾಗಿದೆ. ಯಾಕೆಂದರೆ ಮೂಲಗಳ ಪ್ರಕಾರ, ಸರ್ಕಾರವು ಈ ಅನುಮೋದನೆಗಾಗಿ ಕಾಯುತ್ತಿತ್ತು, ಭಾರತೀಯ ನಿಯಂತ್ರಕರು ಎಸ್ಇಸಿ ಸಭೆಯನ್ನು ಶೀಘ್ರದಲ್ಲೇ ಕರೆಯಲಿದ್ದು, ಡೇಟಾವನ್ನು ಮರುಪರಿಶೀಲಿಸಲಿದ್ದಾರೆ ಮತ್ತು ಭಾರತದಲ್ಲಿ ಬಳಕೆಗಾಗಿ ಅಸ್ಟ್ರಾಜೆನೆಕಾ ಲಸಿಕೆಯನ್ನು ಅನುಮೋದಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯನ್ನು ತಯಾರಿಸುತ್ತಿದೆ. ಇದನ್ನು ಕೊವಿಶೀಲ್ಡ್ ಎಂದು ಕರೆಯಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.