ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಭಾರತದ ಮೊದಲ ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ (pneumococcal conjugate vaccine) “ನ್ಯುಮೋಸಿಲ್” (Pneumosil) ಅನ್ನು ಅನಾವರಣಗೊಳಿಸಿದ್ದಾರೆ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ನಂತಹ ಪಾಲುದಾರರ ಸಹಯೋಗದೊಂದಿಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್ಐಐಪಿಎಲ್) ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್ಐಐಪಿಎಲ್), ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರ್ ಪೂನವಾಲ್ಲಾ, ಪೂನವಾಲ್ಲಾ ಗ್ರೂಪ್ ಆಫ್ ಇಂಡಸ್ಟ್ರೀಸ್ ಮತ್ತು ಸಂಸ್ಥಾಪಕ ಡಾ. ಸೈರಸ್ ಪೂನವಾಲ್ಲಾ ಲಸಿಕೆ ಅನಾವರಣದ ವೇಲೆ ಉಪಸ್ಥಿತರಿದ್ದರು.
“ಸೀರಮ್ ಇನ್ಸ್ಟಿಟ್ಯೂಟ್ನ ಲಸಿಕೆಗಳನ್ನು 170 ದೇಶಗಳಲ್ಲಿ ಬಳಸಲಾಗುತ್ತದೆ ಮತ್ತು ವಿಶ್ವದ ಪ್ರತಿ ಮೂರನೇ ಒಂದು ಮಗುವಿಗೆ ಇದರ ಲಸಿಕೆಯೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀಡಲಾಗುತ್ತದೆ” ಎಂದು ಹರ್ಷವರ್ಧನ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ ದೃಷ್ಟಿಕೋನಕ್ಕೆ ಅನುಗುಣವಾಗಿ, ಸೀರಮ್ ಸಂಸ್ಥೆಯು ಕೋವಿಡ್ -19 ಸಾಂಕ್ರಾಮಿಕ ಲಾಕ್-ಡೌನ್ ಸಮಯದಲ್ಲಿ ಭಾರತ ಸರ್ಕಾರದಿಂದ ಮೊದಲ ದೇಶೀಯ ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ (ಪಿಸಿವಿ) ಅಭಿವೃದ್ಧಿಪಡಿಸಲು ಪರವಾನಗಿ ಪಡೆದುಕೊಂಡಿತು.
ಡಾ. ಹರ್ಷವರ್ಧನ್ ಹೇಳುವಂತೆ, “ಸೀರಮ್ ಇನ್ಸ್ಟಿಟ್ಯೂಟಿನ ಮೊದಲ ಸ್ಥಳೀಯ ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ” ನ್ಯುಮೋಸಿಲ್ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಒಂದೇ ಡೋಸ್ ಮತ್ತು ಮಲ್ಟಿಡೋಸ್ ಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ನ್ಯುಮೋಸಿಲ್ 5 ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಟ್ಟು ಸುರಕ್ಷಿತ ಎಂದು ಸಾಬೀತಾಗಿದೆ. ಭಾರತ ಮತ್ತು ಆಫ್ರಿಕಾದ ವೈವಿಧ್ಯಮಯ ಜನಸಂಖ್ಯೆಯಾದ್ಯಂತ ಇದು ಸುರಕ್ಷತೆ ಮತ್ತು ರೋಗನಿರೋಧಕತೆಯನ್ನು ಸಾಬೀತುಪಡಿಸಿದೆ. ವಯಸ್ಕರಿಗೆ, ಯುವಕರಿಗೆ ಮತ್ತು ಶಿಶುಗಳಿಗೆ ನ್ಯುಮೋಸಿಲ್ ನೀಡಬಹುದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.