ನವದೆಹಲಿ: ಮೂಲಸೌಕರ್ಯ ನಿರ್ಮಾಣ ದಿಗ್ಗಜ ಲಾರ್ಸೆನ್ ಮತ್ತು ಟೌಬ್ರೊ ಸಂಸ್ಥೆಯ ನಿರ್ಮಾಣ ವಿಭಾಗವು 3ಡಿ ಪ್ರಿಂಟ್ ಮನೆಯನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿದೆ. ಇದು ಭಾರತದ ಮೊದಲನೇಯ 3ಡಿ ಪ್ರಿಂಟ್ ಮನೆಯಾಗಿದೆ.
ಕಂಪನಿಯು ತನ್ನ ಕಾಂಚೀಪುರಂ ಸೌಲಭ್ಯದಲ್ಲಿ 700 ಚದರ ಅಡಿ ವಿಸ್ತೀರ್ಣದಲ್ಲಿ ಈ ಮನೆ ಕಟ್ಟಡವನ್ನು ಅಭಿವೃದ್ಧಿಪಡಿಸಿದೆ, ಕಾಂಕ್ರೀಟ್ ಮಿಶ್ರಣದೊಂದಿಗೆ ಸ್ಥಳೀಯವಾಗಿ ಲಭ್ಯವಿರುವ ನಿಯಮಿತ ನಿರ್ಮಾಣ ಸಾಮಗ್ರಿಗಳನ್ನು ಬಳಸಿದೆ.
ಕಂಪ್ಯೂಟರ್ನಲ್ಲಿ ಈ ಮನೆಯ ವಿನ್ಯಾಸವನ್ನು ಮಾಡಿ ಬಳಿಕ ಸ್ವಯಂ ಚಾಲಿತ ಯಂತ್ರಗಳ ಮೂಲಕ ಇದನ್ನು ನಿರ್ಮಿಸಲಾಗಿದೆ. ಇದಕ್ಕೆ ಅಟೊಮೇಟೆಡ್ ರೊಬೋಟಿಕ್ ಕನ್ಸ್ಟ್ರಕ್ಷನ್ ಎಂದು ಕರೆಯಲಾಗುತ್ತದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಸರ್ವರಿಗೂ ಸೂರು ನೀಡಲು 6 ಕೋಟಿ ಮನೆಗಳನ್ನು ಇದೇ ತಂತ್ರಜ್ಞಾನದ ಅಡಿಯಲ್ಲಿ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ತಂತ್ರಜ್ಞಾನ ನಿರ್ಮಾಣದ ವೇಗವನ್ನು ಹೆಚ್ಚಿಸುವುದಲ್ಲದೆ ನಿರ್ಮಾಣ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.