ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ರಿಜಿನಲ್ ಅಕಾಡೆಮಿಕ್ ಸೆಂಟರ್ ಫಾರ್ ಸ್ಪೇಸ್ (ಆರ್ಎಸಿ-ಎಸ್) ಅನ್ನು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಐಐಟಿ-ಬಿಎಚ್ಯುನಲ್ಲಿ ಸ್ಥಾಪಿಸಲಿದೆ.
ಐಐಟಿ-ಬಿಎಚ್ಯು ಮತ್ತು ಇಸ್ರೋ ನಡುವೆ ವರ್ಚುವಲ್ ಆಗಿ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿದ್ದು, ಇದು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಭವಿಷ್ಯದ ತಂತ್ರಜ್ಞಾನದಲ್ಲಿ ಸುಧಾರಿತ ಸಂಶೋಧನೆಗೆ ದಾರಿ ಮಾಡಿಕೊಡಲಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಚಟುವಟಿಕೆಗಳನ್ನು ಉತ್ತೇಜಿಸಲು ಆರ್ಎಸಿ-ಎಸ್ ಪ್ರಮುಖ ಸಹಾಯಕನಾಗಿ ಕಾರ್ಯನಿರ್ವಹಿಸುತ್ತದೆ ಎಂದು ಐಐಟಿ-ಬಿಎಚ್ಯು ನಿರ್ದೇಶಕ ಪ್ರೊ. ಪಿ ಕೆ ಜೈನ್ ಹೇಳಿದ್ದಾರೆ.
ಇಸ್ರೋದ ಸಾಮರ್ಥ್ಯ ವೃದ್ಧಿ, ಅರಿವು ಮೂಡಿಸುವಿಕೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಐಐಟಿ-ಬಿಎಚ್ಯು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆರ್ಎಸಿ-ಎಸ್ ಚಟುವಟಿಕೆಗಳು ಸಂಶೋಧನಾ ಸಾಮರ್ಥ್ಯ, ಮೂಲಸೌಕರ್ಯ, ಇಸ್ರೋ ಮತ್ತು ಐಐಟಿ-ಬಿಎಚ್ಯುನಲ್ಲಿ ಲಭ್ಯವಿರುವ ಪರಿಣತಿಯ ಬಳಕೆಯನ್ನು ಗರಿಷ್ಠಗೊಳಿಸುವತ್ತ ಇರಲಿದೆ.
ಆರ್ಎಸಿ-ಎಸ್ ಸಹಾಯದಿಂದ, ಐಐಟಿ-ಬಿಎಚ್ಯು ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ಅನ್ವಯಿಕೆ, ಕೃಷಿ, ದೂರಸಂಪರ್ಕ, ಹವಾಮಾನ ಮತ್ತು ಜಲ ಸಂಪನ್ಮೂಲಗಳ ಸಂಶೋಧನೆಗಳನ್ನು ಪರಿಣಾಮಕಾರಿಯಾದ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗಾಗಿ ಅಭಿವೃದ್ಧಿ ಮಾದರಿಗಳನ್ನು ವಿನ್ಯಾಸಗೊಳಿಸಲು ಸಾಧ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.