ಬೆಂಗಳೂರು: ರಾಜ್ಯದಲ್ಲಿ ನಿನ್ನೆಯಷ್ಟೇ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆದಿದ್ದು, 80% ರಷ್ಟು ಮತದಾನ ನಡೆದಿದೆ. ಆ ಮೂಲಕ ಕೊರೋನಾ ಸಂಕಷ್ಟದ ನಡುವೆಯೂ ಅಧಿಕ ಪ್ರಮಾಣದ ಮತದಾನವಾಗಿದೆ.
ಬೆಳಗ್ಗೆ 7 ಗಂಟೆಯಿಂದ ತೊಡಗಿದಂತೆ ಆರಂಭವಾದ ಮತದಾನ ಪ್ರಕ್ರಿಯೆ ರಾಜ್ಯದ ವಿವಿಧೆಡೆ ಸಂಜೆ 5 ರ ವರೆಗೆ ಬಿರುಸಿನಿಂದ ನಡೆಯಿತು. ಮತದಾರ ಬಾಂಧವರು ತಮ್ಮ ಮತದಾನದ ಹಕ್ಕನ್ನು ಉತ್ಸಾಹದಿಂದ ಚಲಾಯಿಸುವ ಮೂಲಕ 80% ಮತ ಚಲಾವಣೆ ನಡೆದಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಇನ್ನು ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಚಿಹ್ನೆ ಬದಲಾವಣೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಸಹ ಕಂಡು ಬಂದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಬೇಕಾಗಿ ಬಂತು. ಸುಮಾರು 3,019 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆದಿದ್ದು 80% ಮತದಾನವಾಗಿದೆ.
ಈ ಸಂಬಂಧ ರಾಜ್ಯ ಚುನಾವಣಾ ಕಮಿಷನರ್ ಬಸವರಾಜ ಅವರು ಮಾಹಿತಿ ನೀಡಿದ್ದು, 2015 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಈ ಬಾರಿ ಮತದಾನ ನಡೆದಿದೆ. ಬಳ್ಳಾರಿ ಸೇರಿದಂತೆ ಕೆಲವೆಡೆ ತಾಂತ್ರಿಕ ಸಮಸ್ಯೆಗಳು, ಅಭ್ಯರ್ಥಿಗಳ ಚಿಹ್ನೆ ಬದಲಾವಣೆಯಂತಹ ಕೆಲವು ಸಮಸ್ಯೆಗಳು ಕಂಡು ಬಂದಿದೆ. ಅದರ ಹೊರತಾಗಿ ಸುಲಲಿತವಾಗಿ ಮತ್ತು ಯಶಸ್ವಿಯಾಗಿ ಚುನಾವಣೆ ನಡೆದಿದೆ ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಡಿಸೆಂಬರ್ 22 ರಂದು ನಡೆದ ಒಂದನೇ ಹಂತದ ಮತದಾನದ ಜಿಲ್ಲಾವಾರು ಅಂದಾಜು ಅಂಕಿ ಅಂಶಗಳು ಹೀಗಿವೆ.#PanchayatiRajElection2020 pic.twitter.com/7M0B4LM8oK
— DIPR Karnataka (@KarnatakaVarthe) December 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.