ನವದೆಹಲಿ: ವನ್ಯಜೀವಿ ಸಂರಕ್ಷಣೆಯ ವಿಚಾರದಲ್ಲಿ ಭಾರತ ಮಹತ್ವದ ಸಾಧನೆ ಮಾಡುತ್ತಿದೆ. 2018ರಲ್ಲಿ ಭಾರತದಲ್ಲಿ ನಡೆಸಲಾದ ಚಿರತೆಗಳ ಸಮೀಕ್ಷೆ ವರದಿ ಬಿಡುಗಡೆಯಾಗಿದ್ದು, 2014ಕ್ಕೆ ಹೋಲಿಸಿದರೆ ಚಿರತೆಗಳ ಸಂಖ್ಯೆ 60% ವೃದ್ಧಿ ಆಗಿದೆ.
ಪ್ರಸ್ತುತ ಭಾರತದಲ್ಲಿ ಒಟ್ಟು 12,852 ಚಿರತೆಗಳು ಇವೆ. 2014ರಲ್ಲಿ ನಡೆಸಿದ ಸಮೀಕ್ಷೆಯಗಿಂತ ಚಿರತೆಗಳ ಸಂಖ್ಯೆ 2018ರ ವೇಳೆಗೆ 60% ಹೆಚ್ಚಳವಾಗಿದೆ.
ಮಧ್ಯಪ್ರದೇಶದಲ್ಲಿ 3,421 ಚಿರತೆಗಳಿದ್ದರೆ, ಕರ್ನಾಟಕದಲ್ಲಿ 1783 ಚಿರತೆಗಳಿವೆ, ಮಹಾರಾಷ್ಟ್ರದಲ್ಲಿ 1690 ಚಿರತೆಗಳಿವೆ. ಈ ರಾಜ್ಯಗಳು ಅತೀ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳಿವೆ.
ಕಳೆದ ಕೆಲವು ವರ್ಷಗಳಿಂದ ಹುಲಿ, ಸಿಂಹ, ಚಿರತೆಗಳ ಸಂಖ್ಯೆ ಭಾರತದಲ್ಲಿ ಹೆಚ್ಚಳವಾಗುತ್ತಿದೆ. ಇದು ಭಾರತದ ವನ್ಯಜೀವಿ ಸಂರಕ್ಷಣೆಯ ಬದ್ಧತೆಗೆ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.