ಗಾಂಧೀನಗರ: ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಗುಜರಾತ್ನ ಜಾಮ್ನಗರದಲ್ಲಿ ವಿಶ್ವದ ಅತಿದೊಡ್ಡ ಮೃಗಾಲಯವನ್ನು ನಿರ್ಮಿಸಲು ಸಜ್ಜಾಗಿದೆ ಎಂದು ಮೂಲಗಳು ವರದಿ ಮಾಡಿದೆ.
ಅನಂತ್ ಅಂಬಾನಿಯ ಕನಸಿನ ಯೋಜನೆಯಾದ ಈ ಮೃಗಾಲಯವು ಪ್ರಪಂಚದಾದ್ಯಂತದ ಸುಮಾರು ನೂರು ವಿವಿಧ ಜಾತಿಯ ಪ್ರಾಣಿಗಳು, ಪಕ್ಷಿಗಳು ಮತ್ತು ಸರೀಸೃಪಗಳನ್ನು ಹೊಂದಿರುತ್ತದೆ. ಇದು ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಸಂಕೀರ್ಣ ಹೊಂದಿರುವ ಜಾಮ್ನಗರದ ಮೋತಿ ಖಾವ್ಡಿಯಲ್ಲಿನ ಕಂಪನಿಯ ಸಂಸ್ಕರಣಾಗಾರ ಯೋಜನೆಯ ಹತ್ತಿರವಿರುವ 280 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ.
ಈ ಮೃಗಾಲಯವು ಮುಂದಿನ ಎರಡು ವರ್ಷಗಳಲ್ಲಿ ಸಾರ್ವಜನಿಕರಿಗೆ ತೆರೆದುಕೊಳ್ಳುವ ಸಾಧ್ಯತೆಯಿದೆ. ಇದನ್ನು “ಗ್ರೀನ್ಸ್ ಝೂಲಾಜಿಕಲ್, ರೆಸ್ಕ್ಯು ಮತ್ತು ರಿಹ್ಯಾಬಿಲೇಷನ್ ಕಿಂಗ್ಡಮ್” ಎಂದು ಕರೆಯಲಾಗುತ್ತದೆ ಮತ್ತು ಇದು ಫಾರೆಸ್ಟ್ ಆಫ್ ಇಂಡಿಯಾ, ಇನ್ಸೆಕ್ಟ್ ಲ್ಯಾಂಡ್, ಡ್ರ್ಯಾಗನ್ಸ್ ಲ್ಯಾಂಡ್, ಎಕ್ಸೊಟಿಕ್ ಐಲ್ಯಾಂಡ್, ವೈಲ್ಡ್ ಟ್ರಯಲ್ ಆಫ್ ಗುಜರಾತ್ ಮತ್ತು ಅಕ್ವಾಟಿಕ್ ಕಿಂಗ್ಡಮ್ ಅನ್ನು ಹೊಂದಲಿದೆ.
ಯೋಜನೆಗಾಗಿ, ರಿಲಾಯನ್ಸ್ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆದುಕೊಂಡಿದೆ.
ಅಲ್ಲದೇ, ರಿಲಾಯನ್ಸ್ ಈಗಾಗಲೇ ಜಾಮ್ನಗರದಲ್ಲಿ ರಕ್ಷಣಾ ಕೇಂದ್ರವನ್ನು ಸ್ಥಾಪಿಸಿದ್ದು, ಅಲ್ಲಿ ಕಂಪನಿಯು ಇತ್ತೀಚೆಗೆ ಕೆಲವು ಚಿರತೆಗಳನ್ನು ಸ್ಥಳಾಂತರಿಸಿದೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮದಡಿ ಗಾಯಗೊಂಡ ಅಥವಾ ಮಾನವರೊಂದಿಗೆ ಯಾವುದೇ ರೀತಿಯ ಸಂಘರ್ಷಕ್ಕೆ ಒಳಗಾದ ಚಿರತೆಗಳಿಗೆ ಆಶ್ರಯ ನೀಡಲು ಅರಣ್ಯ ಇಲಾಖೆಗೆ ಸಹಾಯ ಮಾಡುವ ಉದ್ದೇಶದಿಂದ ಇದು ನಿರ್ಮಾಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.