
ನಾಗ್ಪುರ: ನಾಗ್ಪುರ ತರುಣ ಭಾರತದ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ, ಅಂಕಣಕಾರ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ಪ್ರಚಾರ ಪ್ರಮುಖ ಮತ್ತು ವಕ್ತಾರರಾಗಿದ್ದ ಶ್ರೀ ಮಾ. ಗೋ. ವೈದ್ಯ ನಾಗಪುರದಲ್ಲಿಂದು ಮಧ್ಯಾಹ್ನ ನಿಧನ ಹೊಂದಿದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಸಂಘದ ವಲಯದಲ್ಲಿ ಬಾಬುರಾವ್ ವೈದ್ಯ ಎಂದೇ ಚಿರಪರಿಚಿತರಾಗಿದ್ದ ಇವರು ತಮ್ಮ ತೀಕ್ಷ್ಣ ಹಾಗೂ ಮಾಹಿತಿಪ್ರಧಾನ ಲೇಖನಗಳಿಗಾಗಿ ಅಪಾರ ಓದುಗ ಬಳಗವನ್ನು ಹೊಂದಿದ್ದರು.
ಸಂಘ ಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರಿಂದು ಹಿಡಿದು ಈಗಿನ ಸರಸಂಘಚಾಲಕರಾಗಿರುವ ಡಾ. ಮೋಹನ್ ಭಾಗವತ್ ರವರೆಗೂ ಎಲ್ಲ ಸರಸಂಘಚಾಲಕರನ್ನು ನೋಡಿರುವ ಅಪರೂಪದ ವ್ಯಕ್ತಿ. ಅವರ ಅಂತಿಮ ಸಂಸ್ಕಾರ ನಾಳೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


