ನವದೆಹಲಿ: ಪಾಕಿಸ್ಥಾನದ 18 ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ. ಮೂಲಗಳ ಪ್ರಕಾರ, ಜೈಪುರ ಆಡಳಿತದ ಪರವಾಗಿ ಜೈಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು 1955 ರ ಪೌರತ್ವ ಕಾಯ್ದೆಯ ನಿಬಂಧನೆಗಳ ಪ್ರಕಾರ ಭಾರತೀಯ ಪೌರತ್ವದ ಪ್ರಮಾಣ ಪತ್ರವನ್ನು ನೀಡಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, ಜಿಲ್ಲಾಧಿಕಾರಿ ಅನಂತ್ ಸಿಂಗ್ ನೆಹ್ರಾ ಅವರು ಶುಕ್ರವಾರ ಇಲ್ಲಿನ ಕಲೆಕ್ಟರೇಟ್ ಸಭಾಂಗಣದಲ್ಲಿ ವಲಸೆ ಬಂದ 18 ಪಾಕಿಸ್ಥಾನಿಗಳಿಗೆ ಪೌರತ್ವದ ಪ್ರಮಾಣಪತ್ರ ನೀಡಿದ್ದಾರೆ. ಈ ಸಂದರ್ಭದಲ್ಲಿ ನೆಹ್ರಾ ಅವರು ಪೌರತ್ವ ಪಡೆದವರನ್ನು ಅಭಿನಂದಿಸಿದ್ದಾರೆ. ಭಾರತೀಯ ಸಂವಿಧಾನವು ನೀಡಿರುವ ಎಲ್ಲಾ ಹಕ್ಕುಗಳನ್ನು ಮತ್ತು ಸೌಲಭ್ಯಗಳನ್ನು ಭಾರತದ ಸ್ವತಂತ್ರ ಪ್ರಜೆಗಳಾಗಿ ಬಳಸಲು ಇನ್ನು ಮುಂದೆ ಇವರುಗಳಿಗೆ ಸಾಧ್ಯವಾಗಲಿದೆ ಎಂದಿದ್ದಾರೆ.
ಅರ್ಹರಿಗೆ ಪೌರತ್ವ ನೀಡಲು ಜಿಲ್ಲಾಡಳಿತ ನಿರಂತರವಾಗಿ ಕೆಲಸ ಮಾಡುತ್ತಿದೆ. ಇದಕ್ಕೂ ಮುಂಚೆ 50 ಜನರಿಗೆ ಪೌರತ್ವ ನೀಡಲಾಗಿದೆ. ಅರ್ಹ ಎಲ್ಲ ಜನರಿಗೆ ಪೌರತ್ವ ನೀಡುವ ಮೂಲಕ ಶೀಘ್ರದಲ್ಲೇ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದ್ದಾರೆ.
Rajasthan: 18 Hindu refugees from Pakistan were given certificates of citizenship of India by Jaipur district magistrate under provisions of Citizenship Act, 1955 today, says Jaipur district administration pic.twitter.com/a4DNcgae3c
— ANI (@ANI) December 18, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.