ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತರೂಢ ಟಿಎಂಸಿ ಪಕ್ಷವು ತನ್ನ ಸರ್ಕಾರದ 10 ವರ್ಷಗಳ ಆಡಳಿತದ ಸಾಧನೆಗಳ ಬಗ್ಗೆ ಕೆಲ ದಿನಗಳ ಹಿಂದೆ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದೆ. ಈ ರಿಪೋರ್ಟ್ ಕಾರ್ಡ್ಗೆ ಪ್ರತ್ಯುತ್ತರ ನೀಡಲು ಬಿಜೆಪಿ ಸೋಮವಾರ “ಟಿಎಂಸಿ ಫೇಲ್ ಕಾರ್ಡ್” ಅನ್ನು ಬಿಡುಗಡೆ ಮಾಡಿದೆ.
ಪಶ್ಚಿಮಬಂಗಾಳ ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಪಕ್ಷವು, ತೃಣಮೂಲ ಕಾಂಗ್ರೆಸ್ನ ರಿಪೋರ್ಟ್ ಕಾರ್ಡ್ ಅನ್ನು ಪಶ್ಚಿಮ ಬಂಗಾಳದ ಜನರನ್ನು ಮರುಳು ಮಾಡುವ ‘ಸುಳ್ಳು’ ಎಂದು ಬಣ್ಣಿಸಿದೆ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವು ಅಭಿವೃದ್ಧಿಯ ಬಗ್ಗೆ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ.
“ಟಿಎಂಸಿ ಫೇಲ್ ಕಾರ್ಡ್ʼ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ 10 ವರ್ಷಗಳ ಭ್ರಷ್ಟ ಮತ್ತು ಅಸಮರ್ಥ ಆಡಳಿತದ ನಿಜವಾದ ಕಥೆಯಾಗಿದೆ ಎಂದು ಬಿಜೆಪಿ ಹೇಳಿದೆ. ಇದನ್ನು ಬಿಜೆಪಿಯ ಹಿರಿಯ ಮುಖಂಡರಾದ ಸ್ವಪನ್ ದಾಸ್ಗುಪ್ತಾ, ಶಿಶಿರ್ ಬಜೋರಿಯಾ ಮತ್ತು ಶಾಮಿಕ್ ಭಟ್ಟಾಚಾರ್ಯ ಅವರು ನಿನ್ನೆ ಬಿಡುಗಡೆ ಮಾಡಿದರು.
“ಟಿಎಂಸಿ ಬಿಡುಗಡೆ ಮಾಡಿದ ರಿಪೋರ್ಟ್ ಕಾರ್ಡ್ ರಾಜ್ಯದ ಜನರನ್ನು ಮರುಳು ಮಾಡುವ ಸುಳ್ಳಾಗಿದೆ. ಕಳೆದ 10 ವರ್ಷಗಳಲ್ಲಿ, ಟಿಎಂಸಿ ಸರ್ಕಾರವು ಆರ್ಥಿಕ ಬೆಳವಣಿಗೆ, ಕೈಗಾರಿಕೆ, ಆರೋಗ್ಯ, ಶಿಕ್ಷಣ, ಮಹಿಳೆಯರ ಸುರಕ್ಷತೆ ಮತ್ತು ಉದ್ಯೋಗಗಳ ಸೃಷ್ಟಿ ಹೀಗೆ ಎಲ್ಲಾ ವಲಯದಲ್ಲೂ ವಿಫಲವಾಗಿದೆ”ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಭಟ್ಟಾಚಾರ್ಯ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.