ನವದೆಹಲಿ : ಕೊರೋನಾವೈರಸ್ ಕುರಿತಂತೆ ಕಿರುಚಿತ್ರಗಳನ್ನು ಆಚರಿಸಲು ಚಲನಚಿತ್ರೋತ್ಸವವನ್ನು ಆಯೋಜಿಸುವ ಆಲೋಚನೆ ಅದ್ಭುತವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕೊರೊನಾ ವೈರಸ್ ಕಿರುಚಿತ್ರೋತ್ಸವದಲ್ಲಿ ಮಾತನಾಡಿದ ಜಾವಡೇಕರ್, ಒಂದೇ ವಿಷಯದ ಕುರಿತಂತೆ 108 ದೇಶಗಳಿಂದ 2,800 ಚಲನಚಿತ್ರಗಳಿಗೆ ಉತ್ಸವ ಸಾಕ್ಷಿಯಾಗಿದ್ದು, ಇದು ಜನರ ಅಪಾರ ಪ್ರತಿಭೆಗೆ ಉದಾಹರಣೆಯಾಗಿದೆ ಎಂದು ಉತ್ಸವದ ಆಯೋಜಕರನ್ನು ಅಭಿನಂದಿಸಿದರು.
ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತದ ದೇಶಗಳಲ್ಲಿ ದೊಡ್ಡ ವೈಪರೀತ್ಯಕ್ಕೆ ಕಾರಣವಾಗಿದೆ ಎಂದ ಜಾವಡೇಕರ್, 2020ರ ಆರಂಭದಲ್ಲಿ ಬಿಕ್ಕಟ್ಟನ್ನು ಗುರುತಿಸಿದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಸಂಕಷ್ಟವನ್ನು ಉತ್ತಮವಾಗಿ ನಿಭಾಯಿಸಲು ಸಾಧ್ಯವಾಯಿತು ಮತ್ತು ನಂತರ ಭೀತಿಗಳ ವಿರುದ್ಧವೂ ಅವಿಶ್ರಾಂತವಾಗಿ ಶ್ರಮಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.
ಕೊರೊನಾ ವೈರಸ್ ಬಿಕ್ಕಟ್ಟು ಪರಿಹಾರೋಪಾದಿಯಲ್ಲಿದ್ದು, ಭಾರತದಲ್ಲೂ ಲಸಿಕೆ ಲಭ್ಯ, ಪ್ರತಿಕಾಯಗಳು ಸೃಷ್ಟಿಯಾಗುವ ಮುನ್ನ, ಎರಡನೇ ಸುತ್ತಿನ ಲಸಿಕಾ ಕಾರ್ಯದವರೆಗು ಜಾಗೃತಿ ಅವಶ್ಯಕ ಎಂದು ಅವರು ಎಚ್ಚರಿಕೆ ನೀಡಿದರು.
ಗೋವಾದಲ್ಲಿ ನಡೆಯಲಿರುವ 51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ಮಾತನಾಡಿದ ಜಾವಡೇಕರ್, ಐಎಫ್ಎಫ್ಐ ಅನ್ನು ‘ಉನ್ನತ ಮಟ್ಟದಲ್ಲಿ’ ಆಯೋಜಿಸಲಾಗುವುದು, ಜನರು ಉತ್ಸವವನ್ನು ಆನ್ ಲೈನ್ನಲ್ಲಿ ವೀಕ್ಷಿಸಲು ಸಾಧ್ಯವಾಗಲಿದ್ದು ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳನ್ನು ಕಡಿಮೆ ಪ್ರೇಕ್ಷಕರೊಂದಿಗೆ ಸ್ಥಳದಲ್ಲಿ ಆಯೋಜಿಸಲಾಗುತ್ತದೆ. ಐಎಫ್ಎಫ್ಐನ ಈ ಆವೃತ್ತಿಯು 21 ಕಥಾ ಚಲನಚಿತ್ರಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.
Addressed the award ceremony of Online International Coronavirus short films festival. 2800 films, from 108 countries on a single topic is an example of peoples’ immense talent & creativity. @icvsff
These films will play a pivotal role in creating awareness regarding COVID-19. pic.twitter.com/Tvr72SHbT2
— Prakash Javadekar (@PrakashJavdekar) December 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.