ಕೋಲ್ಕತಾ: ಪ್ರಾಜೆಕ್ಟ್ 17 ಎ ಅಥವಾ ನೀಲಗಿರಿ ದರ್ಜೆಯ ಸ್ಟೀಲ್ತ್ ಫ್ರಿಗೇಟ್ ಮತ್ತು ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ & ಇಂಜಿನಿಯರ್ಸ್ ಲಿಮಿಟೆಡ್ನ 2ನೇ ಹಡಗು ಮತ್ತು ಮೊದಲ ‘ಐಎನ್ಎಸ್ ಹಿಮಗಿರಿ’ ಯನ್ನು ಇಂದು ಯಶಸ್ವಿಯಾಗಿ ಕೋಲ್ಕತ್ತಾದಲ್ಲಿ ಉದ್ಘಾಟಿಸಲಾಯಿತು.
ರಕ್ಷಣಾ ಪಡೆಗಳ ಸಿಬ್ಬಂದಿ ಬಿಪಿನ್ ರಾವತ್ ಅವರ ಉಪಸ್ಥಿತಿಯಲ್ಲಿ ಈ ಹಡಗನ್ನು ಉದ್ಘಾಟಿಸಲಾಯಿತು.
ಐಎನ್ಎಸ್ ಹಿಮಗಿರಿಯ ನಿರ್ಮಾಣವನ್ನು 10 ನವೆಂಬರ್ 2018 ರಂದು ಪ್ರಾರಂಭಿಸಲಾಯಿತು ಮತ್ತು 25 ತಿಂಗಳಲ್ಲಿ ಜಿಆರ್ಎಸ್ಇ ಸಮುದ್ರ ಪ್ರಯೋಗಗಳಿಗಾಗಿ ಯುದ್ಧ ನೌಕೆಯನ್ನು ಉದ್ಘಾಟಿಸಿದೆ. 2023 ರ ವೇಳೆಗೆ ಭಾರತೀಯ ನೌಕಾಪಡೆಯ ಸೇವೆಗೆ ಇದು ಸೇರುವ ನಿರೀಕ್ಷೆ ಇದೆ.
ಪ್ರಾಜೆಕ್ಟ್ 17 ಎ ಅಥವಾ ನೀಲಗಿರಿ-ಕ್ಲಾಸ್ ಫ್ರಿಗೇಟ್ಗಳು ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 17 ಶಿವಾಲಿಕ್-ಕ್ಲಾಸ್ ಫ್ರಿಗೇಟ್ಗಳನ್ನು ಅನುಸರಣೆಯಾಗಿದೆ. ಈ ಯೋಜನೆಯಡಿಯಲ್ಲಿ ಒಟ್ಟು 7 ಸ್ಟೀಲ್ತ್ ಫ್ರಿಗೇಟ್ಗಳನ್ನು ಭಾರತದ ಎರಡು ಶಿಪ್ಯಾರ್ಡ್ಗಳು ನಿರ್ಮಿಸಲಿವೆ.
ಎರಡು ಶಿಪ್ಯಾರ್ಡ್ಗಳೊಂದಿಗಿನ ಒಪ್ಪಂದಕ್ಕೆ ಭಾರತ ಸರ್ಕಾರವು 2015 ರಲ್ಲಿ 45,000 ಕೋಟಿ ರೂ ಗೆ ಸಹಿ ಹಾಕಿತು.
‘Himgiri’, the 2nd of Project 17A class of stealth frigates, was launched today at @OfficialGRSE, #Kolkata by Smt Madhulika Rawat, spouse of General Bipin Rawat, Chief of Defence Staff, Chief Guest.#AtmaNirbharBharat @makeinindia @DefenceMinIndia @SpokespersonMoD pic.twitter.com/5q7bxqxVuX
— SpokespersonNavy (@indiannavy) December 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.