ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲ್ಯಾಪ್ ಟಾಪ್, ಟ್ಯಾಬ್ಲೆಟ್ ಉತ್ಪಾದನೆಗೂ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯನ್ನು ವಿಸ್ತರಿಸಲು ಯೋಜಿಸುತ್ತಿದೆ ಎಂದು ಮೂಲಗಳು ವರದಿ ಮಾಡಿದೆ.
ಮೊಬೈಲ್ ಫೋನ್ ಮತ್ತು ಅದರ ಘಟಕಗಳ ತಯಾರಿಕೆಯಲ್ಲಿ ಈ ಯೋಜನೆಯು ಯಶಸ್ಸಿಯಾದ ನಂತರ ಈ ಚಿಂತನೆ ನಡೆಸಲಾಗುತ್ತಿದೆ.
“ಈಗ, ನನ್ನ ಗಮನವು ಭಾರತವನ್ನು ಇತರ ಪ್ರಮುಖ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ತಯಾರಿಕೆಗೆ ಒಂದು ದೊಡ್ಡ ಕೇಂದ್ರವಾಗಿ ಮಾಡಬೇಕು ಎಂಬತ್ತ ಇದೆ, ಅದು ನಮ್ಮ ಅಸ್ತಿತ್ವಕ್ಕೆ ಅವಿಭಾಜ್ಯವಾಗಿದೆ, ಅಂದರೆ ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು ಮತ್ತು ಸರ್ವರ್ಗಳು ನಮ್ಮ ಜೀವನದ ಅಗತ್ಯಗಳಾಗಿವೆ” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಅವರು Ficciಯ 93 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವೇಳೆ ಈ ಹೇಳಿಕೆ ನೀಡಿದ್ದಾರೆ.
ಈ ಯೋಜನೆಯಡಿಯಲ್ಲಿ ತಯಾರಕರು ಐದು ವರ್ಷಗಳ ಕಾಲ ಉತ್ಪಾದನಾ ಉತ್ಪನ್ನಗಳಿಗೆ ಶೇ 4-6 ರಷ್ಟು ಪ್ರೋತ್ಸಾಹವನ್ನು ಪಡೆಯುತ್ತಾರೆ.
ಪಿಎಲ್ಐ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಹದಿನಾರು ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ತಯಾರಕರು ಇಲ್ಲಿಯವರೆಗೆ ಅನುಮೋದನೆಗಳನ್ನು ಪಡೆದಿದ್ದಾರೆ. ಇದು ಸ್ಯಾಮ್ಸಂಗ್, ಫಾಕ್ಸ್ಕಾನ್ ಮತ್ತು ಮೈಕ್ರೋಮ್ಯಾಕ್ಸ್ ಅನ್ನು ಒಳಗೊಂಡಿದೆ. ಆಪಲ್ ಸಹ ತಯಾರಕರಾದ ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಸಹ ಈ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.