ನವದೆಹಲಿ: ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ರದ್ದುಗೊಂಡಿದ್ದ ವಿಮಾನ ಪ್ರಯಾಣಿಕರ ಟಿಕೇಟ್ಗಳಿಗೆ ಸಂಬಂಧಿಸಿದಂತೆ, ಏರ್ಲೈನ್ಸ್ ಸಂಸ್ಥೆಗಳು ಹಣ ಮರುಪಾವತಿ ಮಾಡಿರುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.
ಪ್ರಯಾಣಿಕರ ಪೈಕಿ 74.3%ಗಳಷ್ಟು ಜನರಿಗೆ 3,200 ಕೋಟಿ ರೂ. ಗಳ ಮರುಪಾವತಿ ಪರಿಹಾರ ನೀಡಲಾಗಿದೆ ಎಂದು ತಿಳಿಸಿದೆ. ಮಾರ್ಚ್ ತಿಂಗಳ 25 ರಿಂದ ಮೇ 24 ರ ವರೆಗೆ ರದ್ದುಗೊಂಡಿದ್ದ ವಿಮಾನಗಳಲ್ಲಿ ಟಿಕೇಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಮರುಪಾವತಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಅ. 1 ರಂದು ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಏರ್ಲೈನ್ಸ್ಗಳು ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಿರುವುದಾಗಿ ತಿಳಿಸಿದೆ.
ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ಸಮಸ್ಯೆಗಳಿದ್ದರೆ ಪ್ರಯಾಣಿಕರಿಗೆ ಅದೇ ಟಿಕೇಟ್ ಮೊತ್ತದಲ್ಲಿ ಕ್ರೆಡಿಟ್ ಶೆಲ್ ನೀಡಬೇಕು. 2021 ರ ಮಾರ್ಚ್ 31 ರ ಬಳಿಕ ಇದನ್ನು ಬಳಸಿ ಪ್ರಯಾಣಿಕರಿಗೆ ವಿಮಾನಯಾನ ಅವಕಾಶ ಕಲ್ಪಿಸಬೇಕು ಎಂದು ಏರ್ಲೈನ್ಸ್ಗಳಿಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 219 ಕೋಟಿ ರೂ. ಮೌಲ್ಯದ ಟಿಕೇಟ್ ಗಳನ್ನು ಪ್ರಯಾಣಿಕರ ಒಪ್ಪಿಗೆಯ ಜೊತೆಗೆ ಏರ್ಲೈನ್ಸ್ ನೀಡಿವೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.